ಗೌರಿಬಿದನೂರಿನಿಂದ ಕೆ.ಎ. ರವೀಂದ್ರನಾಥ್ ಬರೆಯುತ್ತಾರೆ: 'ಜೂ.28ರಂದು ಕ.ಪ್ರ. ಸಂಚಿಕೆಯ 2ನೇ ಪುಟದ ಕೋಲಾರ ವಿಭಾಗದ 'ಆಟೋ ಮುಖಾಮುಖಿ ಡಿಕ್ಕಿ' ಎಂಬ ಪೊಲೀಸ್ ಸರ್ಕಲ್ ಸುದ್ದಿಯ 14ನೇ ಸಾಲಿನಲ್ಲಿ 'ಎಸ್ಸೈ ಸುಂದರ್ ಸುದ್ದಿದಿ' ಎಂದಿದೆ. ಇಲ್ಲಿ ಸುದ್ದಿ ಎಂದಿರಬೇಕು.'
"ಗೋಮಾಳದ ಕಬಳಿಕೆ ಯತ್ನ: 2 ಜೆಸಿಬಿ ವಶ' ಎಂಬ ಶಿರೋನಾಮೆಯ ಸುದ್ದಿಯ 2ನೇ ಪ್ಯಾರಾದ 6ನೇ ಸಾಲಿನಲ್ಲಿ 'ತಹಸಾಲ್ದಾರ್' ಎಂದಿದೆ. ಇಲ್ಲಿ 'ತಹಸೀಲ್ದಾರ್' ಎಂದಿರಬೇಕು. 3ನೇ ಪುಟದ 'ಮಾದಕ ದ್ರವ್ಯ ಬಳಕೆ ನಿಷೇಧಕ್ಕೆ ಜಾಗೃತಿ ಜಾಥಾ' ಎಂಬ ಸುದ್ದಿಯ 3ನೇ ಸಾಲಿನ ಕೊನೆಯಲ್ಲಿ 'ವೇಮಗ' ಎಂದಿದೆ. ಇಲ್ಲಿ 'ವೇಮಗಲ್' ಎಂದಿರಬೇಕು. 6ನೇ ಸಾಲಿನಿಂದ 'ಉಸ್ತುವಾರಿಯನ್ನು ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ವೆಂಕಟರಮಣಪ್ಪ ಮಾಡಿದ್ದರು' ಎಂದಿದೆ. ಆದರೆ 'ವೆಂಕಟರಮಣಪ್ಪ ವಹಿಸಿದ್ದರು' ಎಂಬುದೇ ಸೂಕ್ತ.
"ಬಂಗಾರಪೇಟೆ ತಾ. ವಿದ್ಯುತ್ ಬರ' ಎಂಬ ಶಿರೋನಾಮೆಯ ಸುದ್ದಿಯ 2ನೇ ಪ್ಯಾರಾದ 4ನೇ ಸಾಲಿನಲ್ಲಿ 'ವಿದ್ಯುತ್ ವೂರೈಕೆ' ಎಂದಿದೆ. ಇಲ್ಲಿ 'ಪೂರೈಕೆ' ಎಂದಿರಬೇಕು. 4ನೇ ಪ್ಯಾರಾದ 3ನೇ ಸಾಲಿನಲ್ಲಿ '7 ಗಂಟೆ ತ್ರಿಫೆಸ್' ಎಂದಿದೆ. ಇಲ್ಲಿ 'ತ್ರೀಫೇಸ್' ಎಂದಿರಬೇಕು. 'ಪ್ಲಾಸ್ಟಿಕ್ ವಸ್ತುಗಳ ವಶ' ಎಂಬ ಸುದ್ದಿಯ 3ನೇ ಪ್ಯಾರಾದ ಮೊದಲಲ್ಲೇ '05 ಕೆ.ಜಿ. ವಶ' ಎಂದಿದೆ. ಇಲ್ಲಿ '105 ಕೆಜಿ ವಶ' ಎಂದಿರಬೇಕು. ಕೊನೆಯ ಪ್ಯಾರಾದಲ್ಲಿ 'ಇನ್ನೂರ್ವ ಆರೋಗ್ಯ ನಿರೀಕ್ಷಿಕ' ಎಂದಿದೆ. ಇಲ್ಲಿ 'ಇನ್ನೋರ್ವ ಆರೋಗ್ಯ ನಿರೀಕ್ಷಕ' ಎಂದಿರಬೇಕು.'
"ಕರ ವಸೂಲಿಗಾರ ನೇಮಕ' ಎಂಬ ಸುದ್ದಿಯ 3ನೇ ಪ್ಯಾರಾದ 2ನೇ ಸಾಲಿನಲ್ಲಿ 'ಮಹಬೂಬಬ್ಬಾಷ' ಎಂದಿದೆ. ಇಲ್ಲಿ 'ಮಹಬೂಬ್ಬಾಷಾ' ಎಂಬುದು ಸರಿ. ಕೋಲಾರ ವಿಭಾಗದ 11ನೇ ಪುಟದ ಸುದ್ದಿ ಸಂಕ್ಷೇಪದಲ್ಲಿ 'ಗರ್ಭಕೋಶದಲ್ಲಿ ಬೆಳೆದಿದ್ದ ಗಡ್ಡೆ' ಎಂಬ ಸುದ್ದಿಯ 2ನೇ ಸಾಲಿನಲ್ಲಿ 'ತಾಲಕಿನ' ಎಂದಿದೆ. ಇಲ್ಲಿ 'ತಾಲೂಕಿನ' ಎಂದಿರಬೇಕು.'
"ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ' ಎಂಬ ಸುದ್ದಿಯ ಕೊನೆಯಲ್ಲಿ ಉಪಾಧ್ಯಕ್ಷ 'ಲಕ್ಷ್ಮೀದೇವಮ್ಮ' ಎಂದಿದೆ. ಇಲ್ಲಿ 'ಉಪಾಧ್ಯಕ್ಷೆ' ಎಂದಿರಬೇಕು. 'ಯಶಸ್ವಿನಿ ವಯೋವುತಿ ವಿಸ್ತರಣೆಗೆ ಮೆಚ್ಚುಗೆ' ಎಂಬ ಸುದ್ದಿಯ 18ನೇ ಸಾಲಿನಲ್ಲಿ 'ಹೃದಾಯಾಲಯ' ಎಂದಿದೆ. ಇಲ್ಲಿ 'ಹೃದಯಾಲಯ' ಎಂದಿರಬೇಕು.'
"ಪಠ್ಯಪುಸ್ತಕಕ್ಕೆ ಆಗ್ರಹಿಸಿ ಎಸ್ಎಫ್ಐ ಪ್ರತಿಭಟನೆ' ಎಂಬ ಸುದ್ದಿಯ 21ನೇ ಸಾಲಿನಲ್ಲಿ ಬೇಜಾವಾಬ್ದಾರಿತನ ಎಂದಿದೆ. ಇಲ್ಲಿ ಬೇಜವಾಬ್ದಾರಿತನ ಎಂಬುದು ಸೂಕ್ತ ಎಂದು ನನ್ನ ಭಾವನೆ' ಎಂದಿದ್ದಾರೆ.
-ವಿಶ್ವೇಶ್ವರ ಭಟ್