ಸಂಪಾದಕೀಯ

ಬೆಂಗಳೂರು

Rashmi Kasaragodu

ಹಗಲು ಯಮ ಸದನ. ರಾತ್ರಿ ಗಂಧರ್ವ ಪಟ್ಟಣ
    ಬಾಯ್ಕಳೆದು ನಿಂತಿರುವ ಬಕಾಸುರ.
    ಹದಿಹರೆಯದವರೆಲ್ಲ ನದಿಯೋಪಾಧಿಯಲ್ಲಿ ಬಂದು ಸೇರುವ ಅಬ್ಧಿ
    ಅಯ್ಯೋ ಕರ್ಮವೇ ಎಂದು ಪದೇ ಪದೇ ಅನಿಸುವ ಕರ್ಮಭೂಮಿ
    ಕಟ್ಟಡ ಗಗನಕ್ಕೆ, ಮಾನವೀಯತೆ ಪಾತಾಳಕ್ಕೆ
    ಇಲ್ಲಿ ನೀರಿನಷ್ಟೇ ಬೀರಿಗೆ ಮಹತ್ವವಿದೆ
    ಐದು ದಿನ ಹೋರಾಟ, ಎರಡು ದಿನ ಹಾರಾಟ
    ಸಂಸಾರದ ಕುರಿತು ವೈರಾಗ್ಯ ಹುಟ್ಟಬೇಕೆಂದರೆ ಇಲ್ಲಿ ಒಂದಷ್ಟು ದಿನ ವಾಸವಾಗಬೇಕು
    ಇಲ್ಲಿ ಕೂತು ಉಣ್ಣುವವರು ಕಡಿಮೆಯೇ. ಕಾರಣ ಇಲ್ಲಿ ಕೂರಲು ಜಾಗ ಮತ್ತು ಸಮಯವಿರುವುದಿಲ್ಲ
    ಕಿವಿಯಿರುವುದೇ ಇಯರ್ ಫೋನ್ ತುರುಕಿಕೊಳ್ಳಲು ಎಂಬುದು ಇಲ್ಲಿನವರ ನಿಲುವು
    ಇಲ್ಲಿರುವವರಲ್ಲಿ ಎರಡು ವಿಧ. ಭಿಕ್ಷುಕರು ಮತ್ತು ಭಕ್ಷಕರು


-ವಿಶ್ವನಾಥ ಸುಂಕಸಾಳ

vishwasunkasal@yahoo.com

SCROLL FOR NEXT