ಸಂಪಾದಕೀಯ

ಸನ್ಯಾಸಕ್ಕಾಗಿ ಸೌಂದರ್ಯಕ್ಕೆ ಕೊಳ್ಳಿ ಇಟ್ಟಳು

ಜಪಾನಿನ ಇತಿಹಾಸದಲ್ಲಿ ನಡೆದ ಮನಕಲಕುವ ಸತ್ಯ ಘಟನೆಯಿದು. 1797ರಲ್ಲಿ ಜೀವಿಸಿದ್ದ ರೋನೆನ್ ಎಂಬ ಒಬ್ಬ ಯುವತಿ ಜಪಾನಿನ ರಾಣಿಯ ಅಂತಃಪುರದ ದಾಸಿ. ಕವಿಯಿತ್ರಿಯೂ ಆಗಿದ್ದ ಈ ತರುಣಿ ರಾಣಿಯ ಸೇವೆಮಾಡಿಕೊಂಡು ಅವಳ ಅಚ್ಚುಮೆಚ್ಚಿನ ಸಖಿಯಾಗಿದ್ದವಳು. ಅವಳ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದಾಗಿ ಅವಳು ಬಹುಬೇಗ ರಾಣಿಯ ಆತ್ಮೀಯಳಾಗಿದ್ದಳು. ಚಕ್ರವರ್ತಿನಿಯ ಮರಣಾನಂತರ ಅವಳಿಲ್ಲದೆ ಅರಮನೆಯಲ್ಲಿ ಕೆಲಸ ಮಾಡಲು ಮನಸ್ಸಿಲ್ಲದೆ ಕೆಲಸ ಬಿಟ್ಟುಮನೆಗೆ ಬಂದಳು. ಎಷ್ಟೇ ಹಣ, ಅಧಿಕಾರವಿದ್ದರೂ ಸಾವಿನಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂದರಿತು ರೋನೆನ್‌ಗೆ ಜೀವನದಲ್ಲಿ ಜಿಗುಪ್ಸೆ ತಲೆದೋರಿ ಬೌದ್ಧ ಸನ್ಯಾಸಿನಿಯಾಗುವ ನಿರ್ಧಾರ ಮಾಡಿದಳು. ಆದರೆ ಅನುಪಮ ಸೌಂದರ್ಯವತಿಯೂ, ಇನ್ನೂ ತಾರುಣ್ಯಾವಸ್ಥೆಯಲ್ಲಿರುವ ಮಗಳು ಸನ್ಯಾಸಿನಿಯಾಗುವುದು ತಂದೆತಾಯಿಗಳಿಗೆ ಇಷ್ಟವಿಲ್ಲದುದರಿಂದ ಅವರು ಅವಳು ವಿವಾಹವಾಗಬೇಕೆಂದು ಒತ್ತಾಯಿಸಿದರು. ಕೊನೆಗೆ ಒತ್ತಾಯ ಹೆಚ್ಚಾದುದರಿಂದ ರೋನೆನ್ ಒಂದು ಶರತ್ತಿನ ಮೇಲೆ ವಿವಾಹವಾಗಲು ಒಪ್ಪಿದಳು. ಅದೇನೆಂದರೆ, ವಿವಾಹವಾಗಿ ತನಗೆ ಮೂವರು ಮಕ್ಕಳಾಗುವವರಿಗೆ ಸಂಸಾರದಲ್ಲಿದ್ದು, ಆಮೇಲೆ ತಾನು ಬೌದ್ಧ ಸನ್ಯಾಸಿಯಾಗುತ್ತೇನೆಂದು. ಅದೇ ರೀತಿ ವಿವಾಹ ನಡೆದು ಸಂಸಾರ ಜೀವನಕ್ಕೆ ಕಾಲಿಟ್ಟ ರೋನೆನ್ ಪತಿಯೊಡನೆ ಸಂತೋಷದಿಂದ ಕಾಲ ಕಳೆದಳು. ಕ್ರಮೇಣ ಅವಳಿಗೆ ಮೂವರು ಮಕ್ಕಳೂ ಜನಿಸಿದರು. ಮೊದಲೇ ತಿಳಿಸಿದಂತೆ ಆಕೆ ಬೌದ್ಧ ಸನ್ಯಾಸಿನಿಯಾಗಲು ನಿರ್ಧರಿಸಿ, ಕೇಶಮುಂಡನ ಮಾಡಿಸಿಕೊಂಡು ಇಡೋ ನಗರಕ್ಕೆ ತೆರಳಿ ಅಲ್ಲಿ ಧರ್ಮಗುರು ತೆತ್ಸುಗ್ಯುವನ್ನು ಭೇಟಿಯಾಗಿ ತನಗೆ ಸನ್ಯಾಸ ದೀಕ್ಷೆ ನೀಡಲು ಭಿನ್ನವಿಸಿಕೊಂಡಳು. ಅವಳ ಅನುಪಮ ಸೌಂದರ್ಯವನ್ನು ನೋಡಿ ತರುಣ ಭಿಕ್ಷುಗಳ ಮನಸ್ಸು ವಿಚಲಿತವಾಗಬಹುದೆಂದು ಭಾವಿಸಿ, ಆಕೆಗೆ ದೀಕ್ಷೆ ನೀಡಲು ನಿರಾಕರಿಸಲಾಯಿತು. ನಿರಾಶೆಗೊಂಡ ರೋನೆನ್ ಹಕಾವೋ ಎಂಬ ಇನ್ನೊಬ್ಬ ಧರ್ಮಗುರುವಿನ ಬಳಿ ತೆರಳಿ ತನ್ನ ಮನದಿಂಗಿತವನ್ನು ತಿಳಿಸಿದಳು. ಅಲ್ಲಿಯೂ ಸಹ ಸೌಂದರ್ಯ ಮತ್ತು ತಾರುಣ್ಯದ ನೆಪವೊಡ್ಡಿ ದೀಕ್ಷೆ ನೀಡಲು ನಿರಾಕರಿಸಲಾಯಿತು. ಇದರಿಂದಾಗಿ ಅವಳಿಗೆ ತನ್ನ ರೂಪ ಲಾವಣ್ಯಗಳ ಮೇಲೆಯೇ ತುಂಬಾ ಸಿಟ್ಟುಬಂತು. ಒಂದು ದಿನ ಅದೇ ಕೋಪದಿಂದ ಕಾದ ಕಬ್ಬಿಣದಿಂದ ತನ್ನ ಮುಖದ ಮೇಲೆ ಎಲ್ಲೆಂದರಲ್ಲಿ ಬರೆಹಾಕಿಕೊಂಡು ಮುಖ ವಿಕಾರವಾಗುವಂತೆ ಮಾಡಿಕೊಂಡಳು. ಗಾಯವೆಲ್ಲಾ ವಾಸಿಯಾದ ಮೇಲೆ ಮತ್ತೆ ಅದೇ ಬೌದ್ಧ ಗುರು ಹಕಾವೋವಿನ ಬಳಿ ಹೋಗಿ ಈಗಲಾದರೂ ದೀಕ್ಷೆ ನೀಡಿ ಉದ್ಧರಿಸಬೇಕೆಂದು ಕೇಳಿಕೊಂಡಳು. ಅವಳ ನಿಷ್ಠೆ ಮತ್ತು ಸನ್ಯಾಸಿಯಾಗಲೇಬೇಕೆಂಬ ಬಯಕೆಯನ್ನು ಮನಗಂಡು ದೀಕ್ಷೆ ನೀಡಿದರು. ಮುಂದೆ ತನ್ನ ಜೀವನವನ್ನು ಅಧ್ಯಯನ, ಧ್ಯಾನ ಮತ್ತು ಪ್ರವಚನಗಳಲ್ಲಿ ಕಳೆದು ಅಮರಳಾದಳು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!