ಕೋಲ್ಯ ಸಿಗರೇಟು ಸೇದುತ್ತಿದ್ದ, ಅಷ್ಟರಲ್ಲಿ ಅವರಪ್ಪ ಅಲ್ಲಿ ಪ್ರತ್ಯಕ್ಷನಾದ. ಗಾಬರಿಯಿಂದ ಕೋಲ್ಯ ಸಿಗರೇಟನ್ನು ಜೇಬಿನಲ್ಲಿಟ್ಟುಕೊಂಡ.
ಅಪ್ಪ: ಸಿಗರೇಟ್ ಸೇದ್ತಾ ಇದೀಯೇನೋ?
ಕೋಲ್ಯ: ಇಲ್ಲಪ್ಪಾ, ನಾನ್ಯಾಕೆ ಸಿಗರೇಟ್ ಸೇದ್ಲಿ?
ಅಪ್ಪ: ಮತ್ತೆ ನಿನ್ನ ಜೇಬಿಂದ ಹೊಗೆ ಬರ್ತಾ ಇದೆ?
ಕೋಲ್ಯ: ಹೃದಯ ಸುಟ್ಟುಹೋಗುವಂಥ ಮಾತಾಡಿದೆಯಲ್ಲಪ್ಪ ಅದಕ್ಕೆ!
--
ಹುಡುಗನ ಕಡೆಯವರು: ನಮಗೆ ಹುಡುಗಿ ಇಷ್ಟ ಆದ್ಲು. ಮದುವೆ ಯಾವಾಗ ಇಟ್ಕೊಳ್ಳೋಣ?
ಹುಡುಗಿಯ ಕಡೆಯವರು: ಹುಡುಗಿ ಇನ್ನೂ ಓದ್ತಾ ಇದಾಳೆ...
ಹುಡುಗನ ಕಡೆಯವರು: ಅಯ್ಯೋ ಓದ್ಲಿ ಬಿಡಿ, ನಮ್ಮವನೇನು ಚಿಕ್ಕ ಹುಡುಗ ಅಲ್ಲ ನಿಮ್ಮ ಮಗಳ ಪುಸ್ತಕ ಹರಿಯೋಕೆ!