ಸಂಪಾದಕೀಯ

ಸಾವಿನಂಚಿನಲ್ಲಿದ್ದವ ಸಹಾಯಕ್ಕೆ ಮುಂದಾದ

ಸ್ಟೀಫನ್ ಸಟ್ಟನ್ ಹದಿನೈದರ ಪೋರ. ಕ್ಯಾನ್ಸರ್ ರೋಗಕ್ಕೆ ತುತ್ತಾದ. ಪರೀಕ್ಷಿಸಿದಾಗ ಅದು ಗುಣಪಡಿಸಲಾಗದ್ದೆಂದು ವೈದ್ಯರು...

ಸ್ಟೀಫನ್ ಸಟ್ಟನ್ ಹದಿನೈದರ ಪೋರ. ಕ್ಯಾನ್ಸರ್ ರೋಗಕ್ಕೆ ತುತ್ತಾದ. ಪರೀಕ್ಷಿಸಿದಾಗ ಅದು ಗುಣಪಡಿಸಲಾಗದ್ದೆಂದು ವೈದ್ಯರು ತೀರ್ಮಾನಕ್ಕೆ ಬಂದರು. ಇದರಿಂದ ಅವನ ಮನಸ್ಸಿಗೆ ಅಘಾತವಾಗಲಿಲ್ಲ. ಬದಲಾಗಿ ತನ್ನಂತಹ ಹದಿಹರೆಯದವರ ಜೀವನವನ್ನು ಈ  ಕ್ಯಾನ್ಸರ್ ಕಿತ್ತುಕೊಳ್ಳದಿರುವ ಹಾಗೆ ರೋಗಿಗಳಿಗೆ ನೆರವಾಗಬೇಕೆಂದು ತೀರ್ಮಾನಿಸಿದ. ಅದಕ್ಕಾಗಿ ಟೀನ್ ಏಜ್ ಕ್ಯಾನ್ಸರ್ ಟ್ರಸ್ಟ್ ಅನ್ನು ಸ್ಥಾಪಿಸಿ ಫೇಸ್ ಬುಕ್ ನೆರವಿನಿಂದ ಹಣ ಸಂಗ್ರಹಿಸಲು ಪ್ರಾರಂಭಿಸಿದ. ಅವನ ಉದ್ದೇಶ ಕ್ಯಾನ್ಸರ್ ರೋಗಿಗಳಿಗೆ ಪ್ರಾರಂಭದಲ್ಲಿಯೇ ಚಿಕಿತ್ಸೆ ಕೊಡಿಸಿ ಗುಣಪಡಿಸಿ ಅವರ ಬಾಳಿನಲ್ಲಿ ಭರವಸೆ ಮೂಡಿಸುವುದಾಗಿತ್ತು. ಈ ಸದುದ್ದೇಶಕ್ಕೆ ಸಹೃದಯರಿಂದ ಹಣ ಹರಿದು ಬಂತು. ಹತ್ತು ಸಾವಿರ ಪೌಂಡ್ನಷ್ಟು ಹಣ ಸಂಗ್ರಹದಗುರಿಯಿಟ್ಟುಕೊಂಡವನಿಗೆ, ದಕ್ಕಿದ್ದು ಬರೋಬ್ಬರಿ 3.6 ಮಿಲಿಯನ್ ಪೌಂಡ್ಸ್! ಅದೂ ಕೇವಲ ಒಂದು ವರ್ಷದಲ್ಲಿ. ಇವನ ಕಾರ್ಯಕ್ಕೆ ಸ್ಪಂದಿಸಿದವರು 90ಸಾವಿರಕ್ಕೂ ಹೆಚ್ಚು ಜನ. ತೀವ್ರ ಅನಾರೋಗ್ಯದಿಂದ ಬರ್ಮಿಂಗ್ ಹ್ಯಾಂನ ಆಸ್ಪತ್ರೆಗೆ ಸೇರಿದಾಗ ಇನ್ನು ಹೆಚ್ಚುದಿನ ಜೀವಿಸಲು ಸಾಧ್ಯವಿಲ್ಲವೆಂದೆಣಿಸಿ, ತನಗೆ ಸಹಾಯ ಹಸ್ತ ನೀಡಿದ, ಬೆಂಬಲಿಸಿದ ಎಲ್ಲರಿಗೂ ಅಂತಿಮ ವಿದಾಯ ಹೇಳಿದ ಸ್ಟೀಫನ್ ಕೊನೆಯುಸಿರೆಳೆದಿದ್ದು ಇದೇ ವರ್ಷದ ಮೇ 14ರಂದು. ಬ್ರಿಟನ್ ಪ್ರಧಾನಿ ತಮ್ಮ ಶೋಕ ಸಂದೇಶದಲ್ಲಿ, "ನನ್ನ ಹೃದಯ ಹೆಮ್ಮೆಯಿಂದ ಬೀಗುತ್ತಿದೆ, ಆದರೆ ಇಂತಹ ಧೈರ್ಯಶಾಲಿ, ನಿಸ್ವಾರ್ಥ ಬಾಲಕನ ಸಾವಿನಿಂದ ನೋವಿನಿಂದ ಕುಗ್ಗಿದೆ" ಎಂದು ದುಃಖ ವ್ಯಕ್ತಪಡಿಸಿದರು.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ