ರವಿಂದ್ರನಾಥ ಶಿ. ಯಡಹಳ್ಳಿ, ಬೀಳಗಿ
ಪ್ರೇಮಾಂಕುರಕ್ಕೂ ಬೀಜಾಂಕುರಕ್ಕೂ ಇರುವ ವತ್ಯಾಸವೇನು?
ಒಂದು ಮಾನಸಿಕ, ಇನ್ನೊಂದು ದೈಹಿಕ!
ರಮೇಶ್, ಹನುಮನಾಳು
ಮನೆಯವರು ಚಿಕ್ಕವಯಸ್ಸಿಗೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿದರೆ ಅಪರಾಧ. ಅವರೇ ಮಾಡಿಕೊಂಡರೆ?
ಸ್ವಯಂಕೃತಾಪರಾಧ!
ಸಂತೆಬೆನ್ನೂರು ಫೈಜ್ನಟ್ರಾಜ್
ಈಗಿನ ಹುಡುಗಿಯರು ನೆಟ್ಟಗೆ ಜಡೇನೇ ಹಾಕಲ್ಲ ಅವರಿಗೆ ಗುಲಾಬಿ ಕೊಡೋದು ದಂಡ ಅಲ್ವಾ?
ಕಿವಿ ಮೇಲೆ ಇಟ್ನೋಡಿ!
ಅಂಬಿ ಅಜಯ್, ಯಾದಗಿರಿ
ನಾನು ಒಂದು ಹುಡುಗೀನ ಲವ್ ಮಾಡ್ತಿದೀನಿ. ನಿಮ್ಮ ಸಲಹೆ?
ಒಂದೇ ಹುಡುಗೀನ ಲವ್ ಮಾಡುವುದಕ್ಕೆ ಸಲಹೆ- ಎಚ್ಚರಿಕೆ ತೆಗೆದುಕೊಳ್ಳಬೇಕಿಲ್ಲ.
ಪಿ. ಜೆ. ರಾಘವೇಂದ್ರ, ಮೈಸೂರು
ಪ್ರಶ್ನೆ ಕೇಳಬೇಕೆಂದರೆ ನೀವು ಯಾರಲ್ಲಿ ಕೇಳುತ್ತೀರಿ?
ನಾವು ಕೇಳಬೇಕಿರುವ ಪ್ರಶ್ನೆಯನ್ನು ಓದುಗರ ಬಾಯಲ್ಲೇ ಹೇಳಿಸುವ ಕಲೆ ನಮಗೆ ಕರಗತ.
ಬಾಣಭಟ್ಟ