ಸಂಪಾದಕೀಯ

ಕೃಷ್ಣರಾಜ ಭೂಪ ಮನೆಯೆಲ್ಲ ದೀಪ

ಮುಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರು ಸಿಂಹಾಸನವೇರಿದಾಗ ಅವರಿಗೆ ಕೇವಲ ಐದು ವರ್ಷ. ಹೈದರಾಲಿ ಮತ್ತು ಟಿಪ್ಪುವಿನ ದಿವಾನರಾಗಿದ್ದ ಪೂರ್ಣಯ್ಯನವರನ್ನೇ ಆಗಲೂ ದಿವಾನರನ್ನಾಗಿ ಮುಂದುವರೆಸಲಾಯಿತು. ಆದರೆ ಪೂರ್ಣಯ್ಯ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಹಂಗಾಮಿ ರೆಸಿಡೆಂಟ್ ಆಗಿದ್ದ ಎ.ಹೆಚ್.ಕೋಲ್ ಮದ್ರಾಸು ಗವರ್ನರರಿಗೆ ಬರೆದ ಪತ್ರವೊಂದರಲ್ಲಿ ವಿನಯನಿಧಿ ಕೃಷ್ಣರಾಜ ಮತ್ತು ಅವಿಧೇಯ ಪೂರ್ಣಯ್ಯನವರ ಕುರಿತಾಗಿ ಮಾಹಿತಿಗಳು ಸಿಗುತ್ತವೆ. ತರುಣ ರಾಜಪುತ್ರರು ಅಸಮಾಧಾನಗೊಂಡಿರುವುದರಿಂದ ರಾಜ ಮರ್ಯಾದೆಗೆ ಲೋಪಬಾರದಂತೆ ವರ್ತಿಸಲು ದಿವಾನರಿಗೆ ಸೂಚಿಸಲಾಯಿತು. ಆದರೂ "ಇದೆಲ್ಲ ತಾರುಣ್ಯದ ಲಕ್ಷಣಗಳು, ಅಯೋಗ್ಯ ಬುದ್ಧಿಯ ಪರಿಣಾಮ" ಎಂದು ಪೂರ್ಣಯ್ಯ ಉಪೇಕ್ಷಿಸಿದರು. ಒಮ್ಮೆಯಂತೂ ಪೂರ್ಣಯ್ಯ, "ತಲೆಹರಟೆ ಮಾಡಿದರೆ, ಅವರನ್ನು(ಕೃಷ್ಣರಾಜರನ್ನು) ಓಡಿಸಿ, ಇನ್ನೊಬ್ಬನನ್ನು ಸಿಂಹಾಸನದ ಮೇಲೆ ಕೂಡಿಸಲಾದೀತು" ಎಂದು ಉದ್ಧಟತನವನ್ನು ತೋರಿಸಿದರು.
ಪೂರ್ಣಯ್ಯನವರ ಮಗ ಅನಂತಯ್ಯ, ಭಾವಮೈದುನ ಕುಪ್ಪಣ್ಣ ಲಕ್ಷಗಟ್ಟಲೆ ಬೆಲೆಬಾಳುವ ಅರಮನೆ ಆಭರಣಗಳನ್ನು ಹೊತ್ತೊಯ್ದಾಗಲೂ ಪೂರ್ಣಯ್ಯ ಮಗನ ಪರವಾಗಿಯೇ ಮಾತನಾಡಿದರು. ಕೊನೆಗೆ ಬ್ರಿಟಿಷರು ಪೂರ್ಣಯ್ಯನವರನ್ನು ದಿವಾನಗಿರಿಯಿಂದ ಬಿಡುಗಡೆಗೊಳಿಸಲು ನಿರ್ಧರಿಸಿ, ಲೆಕ್ಕ ಪರಿಶೀಲನೆ ಮಾಡಿಸಿದರು. ಲೆಕ್ಕ ಪರೀಕ್ಷೆಯಿಂದ ಪೂರ್ಣಯ್ಯನವರಿಂದ ರಾಜಭಂಡಾರಕ್ಕೆ 6,31,980 ಕಂಠೀರಾಯಿ ವರಹಗಳು ಬರಬೇಕೆಂದಾಯಿತು. ಇದಿಷ್ಟೂ ಬ್ರಾಹ್ಮಣ ಸಂತರ್ಪಣೆಗಾದ ವೆಚ್ಚವೆಂದು ಪೂರ್ಣಯ್ಯ ಹೇಳಿಬಿಟ್ಟರು. ಆದರೆ ಪೂರ್ಣಯ್ಯ ಆ ಹಣವನ್ನು ಹಿಂತಿರುಗಿಸಲೇಬೇಕೆಂದು ರೆಸಿಡೆಂಟ್ ಕೋಲ್ ಆಗ್ರಹ ಪಡಿಸಿದ. ಕೊನೆಗೆ ಮಹಾರಾಜರೇ, ವೃದ್ಧ ಪೂರ್ಣಯ್ಯನವರ ಮನಸ್ಸನ್ನು ನೋಯಿಸಲಿಚ್ಛಿಸದೆ, ಅವರ ಕಡೆಯ ದಿನಗಳು ಕಷ್ಟಕ್ಕೆ ಗುರಿಯಾಗುವುದನ್ನು ತಪ್ಪಿಸಲು ಅವರು ನೀಡಬೇಕಾಗಿದ್ದ ಹಣಕ್ಕೆ ವಿನಾಯ್ತಿ ನೀಡಿದರು. ಅಲ್ಲದೆ ಅವರ ತಿಂಗಳ ಸಂಬಳ 500 ಕಂಠೀರಾಯ ವರಹಗಳನ್ನು ಅವರು ಜೀವಂತರಾಗಿರುವವರೆಗೂ ನೀಡಬೇಕೆಂದು ಆಜ್ಞೆ ಮಾಡಿದರು. ಮಹಾರಾಜರ ಔದಾರ್ಯದ ನಡವಳಿಕೆಯನ್ನು ಕಂಡು ಪೂರ್ಣಯ್ಯ ಸಂಪೂರ್ಣ ಕುಗ್ಗಿಹೋದರು. ಪೂರ್ಣಯ್ಯ ಮಹಾರಾಜರನ್ನು ಭೇಟಿಯಾಗಿ ಕ್ಷಮೆಯಾಚಿಸಿದರು. ಮಹಾರಾಜರು ಆಗಲೂ ದಿವಾನರನ್ನು ಮರ್ಯಾದೆಯಿಂದ ಕಂಡು ಜೋಡಿಶಾಲು ಹೊದಿಸಿ ಗೌರವಿಸಿದರು. 1812ರಲ್ಲಿ ಪೂರ್ಣಯ್ಯ ಮರಣಿಸಿದ ಮೇಲೆ ಅವರಿಗೆ ಸಲ್ಲುತ್ತಿದ್ದ ಮಾಸಿಕ ವೇತನವನ್ನು ಅವರ ಹಿರಿಯಮಗ ಅನಂತರಾಯನಿಗೆ ಮುಂದುವರೆಸಲಾಯಿತು. ಮಹಾರಾಜರ ಇಂತಹ ಸಹೃದಯ ಗುಣವನ್ನು ನೋಡಿಯೇ ಪ್ರಜೆಗಳೆಲ್ಲ "ಕೃಷ್ಣರಾಜ ಭೂಪ ಮನೆಯೆಲ್ಲ ದೀಪ" ಎಂದು ಕೊಂಡಾಡಿದರು. ಈ ಘಟನೆಯನ್ನು "ಮೈಸೂರು ಇತಿಹಾಸದ ಹಳೆಯ ಪುಟಗಳು" ಗ್ರಂಥದಲ್ಲಿ ತಿ.ತಾ.ಶರ್ಮರು ಉಲ್ಲೇಖಿಸಿದ್ದಾರೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!