ಕಂಡಕ್ಟರ್ ಬದಲಿಗೆ ತಾನೇ ಸೀಟಿ ಊದಿಕೊಳ್ಳುವ ವಾಹನ
ಚಲಿಸುವ ಶೌಚಾಲಯ
ತನಗೆಂದು ಹಾಕಿಕೊಟ್ಟ ಮಾರ್ಗದಲ್ಲೇ ನಡೆಯುವ ನಿಷ್ಠೆಯುಳ್ಳದ್ದು
ಚಾಯ್ ಪೆ ಚರ್ಚೆ ಮಾಡಲು ಇದು ಸೂಕ್ತ ಜಾಗ
ಊರಿಗೇ ಒಂದು ದಾರಿಯಾದರೆ ರೈಲಿಗೇ ಒಂದು ದಾರಿ
ಹಳ್ಳ, ಗುಡ್ಡ, ಬೆಟ್ಟ, ಗದ್ದೆ, ನಗರ ಎಲ್ಲವೂ ಹಾದುಹೋಗುವ ಹಾದಿಯೇ ಇದಕ್ಕೆ
ವೈವಿಧ್ಯಮಯ ಸಂಚಾರೀ ಸಮಾಜ
ರೈಲು ಬಿಡುವುದೇ ಸುಲಭ, ರೈಲಿನಲ್ಲಿ ಸಂಚರಿಸುವುದಕ್ಕಿಂತ..
ಬೋಗಿಯ ತುಂಬಾ ಭೋಗಿಗಳ ತುಂಬಿಕೊಂಡು ಸಂಚರಿಸುವ ಯಾನ
ವಿಶ್ವನಾಥ ಸುಂಕಸಾಳ