ಸಂಪಾದಕೀಯ

ಈ ವ್ಯಕ್ತಿ ಯಾರು ಗೊತ್ತೆ?

ಈಸ್ಟಮನ್ ಕೊಡಾಕ್ ಕಂಪನಿಯ ಸ್ಥಾಪಕ ಜಾಜರ್ ಈಸ್ಟ್ಮನ್ರವರ ಜೀವನವೇ ಒಂದು ಸಾಹಸಮಯ ಕಥೆ. ಇಂದು ನಾವು....

ಈಸ್ಟಮನ್ ಕೊಡಾಕ್ ಕಂಪನಿಯ ಸ್ಥಾಪಕ ಜಾಜರ್ ಈಸ್ಟ್ಮನ್ರವರ ಜೀವನವೇ ಒಂದು ಸಾಹಸಮಯ ಕಥೆ. ಇಂದು ನಾವು ಈಸ್ಟ್ಮನ್ ಕಲರ್ ಚಿತ್ರಗಳನ್ನು ನೋಡಿ ಸಂತೋಷ ಪಡುತ್ತೇವೆ. ಹೀಗೆ ಅದ್ಭುತವಾದ ಬಣ್ಣದ ತಯಾರಕ ಈಸ್ಟ್ಮನ್ ನಿಜಕ್ಕೂ ಸಾಹಸವಂತ. ಫೋಟೋ ಪ್ಲೇಟುಗಳಿಗೆ ಅಗತ್ಯವಾದ ಸಾಮಗ್ರಿಗಳನ್ನು ತಯಾರಿಸುವುದು, ಬಣ್ಣದ ಬಗ್ಗೆ ಸಂಶೋಧನೆ ಮಾಡುವುದು ಇದೇ ಅವನ ಕಾಯಕವಾಗಿತ್ತು. ಹೊಟ್ಟೆಪಾಡಿಗಾಗಿ ಅವನು ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಬಣ್ಣದ ಬಗ್ಗೆ ಸಂಶೋಧನೆ ಮಾಡುತ್ತಿದ್ದ. ರಾತ್ರಿಯೆಲ್ಲಾ ತನ್ನ ಸಂಶೋಧನೆಯಲ್ಲಿ ಮುಳುಗಿ ತನ್ನ ಕೈಯನ್ನೆಲ್ಲಾ ಕಪ್ಪು ಮಾಡಿಕೊಳ್ಳುತ್ತಿದ್ದ. ಅವನು ಉಪಯೋಗಿಸುತ್ತಿದ್ದ ಬಣ್ಣಗಳು ಅವನ ಕೈಬಣ್ಣವನ್ನು ಕಪ್ಪಗೆ ಮಾಡಿದ್ದವು. ಅದು ರಾಸಾಯಿನಿಕ ಕ್ರಿಯೆಯಿಂದ ಆಗಿದ್ದುದರಿಂದ ಅದನ್ನು ತೊಳೆದುಕೊಂಡರೆ ಹೋಗುತ್ತಿರಲಿಲ್ಲ. ಬ್ಯಾಂಕಿನಲ್ಲಿದ್ದ ಅವನ ಮೇಲಧಿಕಾರಿಗಳಿಗೆ ಅವನ ಸಂಶೋಧನೆಯ ಮಹತ್ವ ತಿಳಿದಿರಲಿಲ್ಲ. ಹೀಗಾಗಿ ಒಂದು ದಿನ ಅಧಿಕಾರಿಯು ಈಸ್ಟ್ಮನ್ನನ್ನು ಕರೆದು, "ಏನಿದು ನಿನ್ನ ಬೆರಳುಗಳು ಕಪ್ಪಗೆ ಅಸಹ್ಯಕರವಾಗಿ ಗೋಚರಿಸುತ್ತೆ? ಅದನ್ನು ಶುಭ್ರವಾಗಿ ತೊಳೆದುಕೊಂಡು ಬರಬಾರದೆ?" ಎಂದ. ಅದಕ್ಕೆ ಈಸ್ಟ್ಮನ್ ತಾನು ರಾತ್ರಿ ಸಮಯದಲ್ಲಿ ಫೋಟೋಗ್ರಫಿಯ ಬಗ್ಗೆ ರಾಸಾಯಿನಿಕ ಪ್ರಯೋಗಗಳನ್ನು ಮಾಡುತ್ತಿರುವುದರಿಂದ ಅದು ಎಷ್ಟು ತೊಳೆದರೂ ಹೋಗುತಿಲ್ಲ. ತನ್ನ ಕೈ ಬಣ್ಣ ಹಾಗೆಯೇ ಬದಲಾಗಿದೆಯೆಂದು ವಿವರಿಸಿದ. ಅವನ ಉತ್ತರ ಕೇಳಿ ಅಧಿಕಾರಿಗೆ ಕೋಪಬಂತು. ಈಸ್ಟ್ಮನ್ನ ಪ್ರಯೋಗದಿಂದ ಬ್ಯಾಂಕಿಗೆ ಆಗಬೇಕಾದ್ದು ಏನೂ ಇಲ್ಲವೆಂದೂ, ಇನ್ನು ಮುಂದೆ ಕಚೇರಿಯಲ್ಲಿ ಕೆಲಸ ಮಾಡಬೇಕಾದರೆ, ಬೆರಳುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಇಲ್ಲವೇ ಬ್ಯಾಂಕಿನ ಕೆಲಸಕ್ಕೆ ರಾಜಿನಾಮೆ ನೀಡಬೇಕು ಎಂದು ನಿರ್ದಾಕ್ಷಿಣ್ಯವಾಗಿ ತಿಳಿಸಿದ. ಅದನ್ನು ಕೇಳಿದ ಈಸ್ಟ್ಮನ್ ಒಂದು ಕ್ಷಣ ಯೋಚಿಸಿದ. ಕೊನೆಗೆ ನಿರ್ಧಾರದ ಧ್ವನಿಯಲ್ಲಿ, "ನೋಡಿ, ನಿಮ್ಮ ನೌಕರಿ ನನಗೆ ಆಹಾರಕ್ಕೆ ಆಧಾರವಾಗಿದೆ, ನಿಜ. ಅದಕ್ಕಾಗಿ ನಾನು ಕೃತಜ್ಞ. ಆದರೆ, ಫೋಟೋಗ್ರಫಿ ನನ್ನ ಜೀವನದ ಗುರಿಯಾಗಿದೆ. ಅದನ್ನು ಬಿಡಲಾರೆ. ಆದ್ದರಿಂದ ನನ್ನನ್ನು ಬ್ಯಾಂಕಿನ ಕೆಲಸದಿಂದ ಮುಕ್ತಗೊಳಿಸಿರಿ" ಎಂದು ಹೇಳಿದ. ಕೈಕೆಸರಾದರೆ ಮಾತ್ರ ಬಾಯಿ ಮೊಸರಾಗಲು ಸಾಧ್ಯ ಎಂಬುದು ಅವನ ಅಭಿಪ್ರಾಯವಾಗಿತ್ತು. ಕಡು ಬಡತನದಲ್ಲಿಯೂ ಅವನು ತನ್ನ ಸಂಶೋಧನೆಗಾಗಿ ಒಳ್ಳೆಯ ಆದಾಯ ತರುವ ಕೆಲಸವನ್ನು ಬಿಟ್ಟು ಸಂಶೋಧನೆಯನ್ನೇ ಮುಂದುವರೆಸಿದ. ಇಂದು ನಾವು ವರ್ಣರಂಜಿತ ಚಲನಚಿತ್ರಗಳನ್ನು ನೋಡುತ್ತೀವಲ್ಲ, ಅದರ ಹಿಂದೆ ಇದೇ ಈಸ್ಟ್ಮನ್ನ ಶ್ರಮವಿದೆ.



 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

-rajsundar1957@gmail.com



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!

ಮಲೆನಾಡು, ಕರಾವಳಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ: ಕೇಂದ್ರ ಸಚಿವ ವಿ. ಸೋಮಣ್ಣ