ಗ್ರಾಹಕರನ್ನು ಮಾಲು ಕೊಳ್ಳುವಂತೆ ಕಮಾಲು ಮಾಡುವ ಕೇಂದ್ರ
ಇಲ್ಲಿ ಯಾರೂ ಚಿಲ್ಲರೆಗಾಗಿ ಚಿಲ್ಲರೆ ಬುದ್ಧಿ ತೋರಿಸುವುದಿಲ್ಲ
ಮಾಲ್ಗಳಲ್ಲಿ ಮಾಲು ಹೇಗಿದೆಯೆಂದು ಯಾರೂ ನೋಡುವುದಿಲ್ಲ. ಪ್ರತಿಷ್ಠೆಯ ರುಮಾಲು ಮುಖ್ಯ
ತಳ್ಳುಗಾಡಿಯವರ ಬದುಕನ್ನು ಮೂಲೆಗೆ ತಳ್ಳಿದ ಕಳ್ಳ ಪರದೇಸಿಗಳ ಅಂಗಡಿ
ಇಲ್ಲಿ ಕೊಳೆತದ್ದೂ ಕೂಡ ಹೊಚ್ಚ ಹೊಸ ಪ್ಯಾಕೆಟ್ನಲ್ಲಿ ಸಿಗುತ್ತದೆ
ರೂಮು ಏಸಿ. ಬೆಲೆ ಮಾತ್ರ ಬಿಸಿಬಿಸಿ
ಈಗಿನ ಮೇಲು ಮತ್ತು ಫೀಮೇಲುಗಳ ಸ್ವರ್ಗ
ರೇಟು ಹೆಚ್ಚಾದರೂ ಮಾಲೇ ಮೇಲು. ಎತ್ತರದಲ್ಲಿರುವುದರಿಂದ..
ಆಫರ್ ಕೊಟ್ಟು ಪಾಪರ್ ಮಾಡುವ ಯೋಜಕರು
ಗೂಡಂಗಡಿಗಳ ಯಮದೂತ
-ವಿಶ್ವನಾಥ ಸುಂಕಸಾಳ
vishwasunkasal@yahoo.com