ಶ್ರೀಲಂಕಾ. ದೊಡ್ಡ ದೇಶದ ಕೆಳಗಡೆ ಇರುವ ಚಿಕ್ಕ ದೇಶ.
ಆದೇಶ ಮಾಡುವಷ್ಟು ಅಧಿಕಾರ ಪೂರ್ತಿ ಇಲ್ಲದಿದ್ದಾಗ ನಾವು ಮಾಡುವಂಥದ್ದು
ಇದು ಹೇಳುವವರು ಅನುಸರಿಸದ್ದು, ಕೇಳುವವರಿಗೆ ಉಪಯೋಗವಿಲ್ಲದ್ದು
ಹಲವರ ಉಪಜೀವ್ಯ
ದೇಶಿಕರೆನಿಸಿಕೊಂಡ ಹಲವರ ಕಾಯಂ ಉದ್ಯೋಗ
ತಮ್ಮಿಂದ ಮಾಡಲಾಗದ್ದನ್ನು ಮಾಡುವಂತೆ ಬೇರೆಯವರಿಗೆ ಹೇಳುವ ಕಿವಿ(ಕಚ್ಚುವ) ಮಾತು
ಇದನ್ನು ಕೇಳಲು ಮತ್ತು ಹೇಳಲು ಮಜಾ ಇರುತ್ತದೆ
ಇದೂ ಕೂಡ ಕೆಲವೊಮ್ಮೆ ಪುಕ್ಕಟೆ ಸಿಗುವುದಿಲ್ಲ ಕಾಣಿಕೆ ಹಾಕಬೇಕಾಗುತ್ತದೆ
ಇದನ್ನೇ ಫುಲ್‌ಟೈಂ ಉದ್ಯೋಗವಾಗಿಸಿಕೊಳ್ಳುವ ಇಚ್ಛೆ ಇದ್ದರೆ ಪೀಠಾಧಿಪತಿಯಾಗಬಹುದು
ಯಾರಿಗೆ ಉಪದೇಶ ಮಾಡಲು ಬರುವುದೋ ಆತ ಉತ್ತಮ ಶಿಕ್ಷಕನಾಗಬಲ್ಲ
ಕೆಲವು ಹೆಸರಿಗೆ ಮತ್ರ ಅಮೃತವಾಗಿರುತ್ತದೆ. ಉದಾಹರಣೆಗೆ ಉಪದೇಶಾಮೃತ
ಹಿರಿಯರ ಉಪದೇಶಗಳನ್ನು ಲಕ್ಷ್ಯಗೊಟ್ಟು ಕೇಳಬೇಕು. ನಮ್ಮ ಮಕ್ಕಳಿಗೆ ಹೇಳಲು ಬೇಕಾಗುತ್ತದೆ
ತನ್ನಲ್ಲಿ ಸಾಕಷ್ಟು ಜ್ಞಾನಸಂಗ್ರಹ ಆಗಿದೆ ಎಂದು ಭಾವಿಸಿದವನ ಪ್ರತಿಯೊಂದು ಮಾತು
ಇದರ ವಿಷಯದಲ್ಲಿ ಎಲ್ಲರೂ ದಾನಿಗಳೇ
ನಿದ್ರೆ ಗುಳಿಗೆ
ಉಪೇಕ್ಷೆಯೇ ಇದರ ಅಂತಿಮ ಪರಿಣಾಮ
-ವಿಶ್ವನಾಥ ಸುಂಕಸಾಳ
vishwasunkasal@yahoo.com