ಮೇಷ್ಟ್ರು: ನೀನು ಕಾಡಲ್ಲಿ ಇದ್ದೀಯ ಅನ್ಕೋ. ಆಗ ಒಂದು ತೋಳ ನಿನ್ನ ಎದುರಿಗೆ ಬಂದ್ರೆ ಏನ್ಮಾಡ್ತೀಯಾ?
ಮರಿಕೋಲ್ಯ: ಅದಕ್ಯಾಕೆ ಟೆನ್ಶನ್ ಸರ್, ನಾನು ಓಡಿ ಹೋಗಿ ಮರ ಹತ್ತಿ ಕೂಡ್ತೀನಿ.
ಮೇಷ್ಟ್ರು: ಒಂದ್ವೇಳೆ ಆ ತೋಳ ಮರಾ ಹತ್ತಿತು ಅಂದ್ರೆ?
ಮರಿಕೋಲ್ಯ: ನೋ ಪ್ರಾಬ್ಲಮ್ ಸರ್, ನಾನು ಅಲ್ಲಿಂದ ನದಿಯಲ್ಲಿ ಜಿಗೀತೀನಿ
ಮೇಷ್ಟ್ರು: ಒಂದು ವೇಳೆ ಅದೂ ನದೀಲಿ ಹಾರಿತು ಅಂದ್ರೆ?
ಮರಿಕೋಲ್ಯ: ಅರೇ ಇಸ್ಕಿ, ಏನ್ ಸರ್? ತೋಳಕ್ಕೆ ನಿಮ್ಮ ತಂಗೀನೇನಾದ್ರೂ ಕೊಟ್ಟಿದ್ದೀರಾ? ಅಷ್ಟೊತ್ತಿಂದ ಬರೀ ಅದರ ಪರವಾಗೇ ಮಾತಾಡ್ತಿದೀರಲ್ಲ!