ಸಂಪಾದಕೀಯ

ಮೂಢನಂಬಿಕೆಯನ್ನು ವಿರೋಧಿಸಿದ ಸಿಂದಗಿಯ ಪಟ್ಟದ್ದೇವರು

ಸಿಂದಗಿಯ ಪಟ್ಟದ್ದೇವರು ಎಂದೇ ಖ್ಯಾತರಾದ ಲಿಂಗಯ್ಯ ಬಡಕುಟುಂಬದಲ್ಲಿ ಜನಿಸಿದವರು. ಸಿಂದಗಿಯ ಪಟ್ಟದ್ದೇವರಾದ ಮೇಲೂ ಸಾಮಾನ್ಯರಾಗಿ ಬದುಕಿದರು. ಹಾನಗಲ್ ಕುಮಾರಸ್ವಾಮಿಯವರ ಶಿಷ್ಯರಾಗಿ, ಅವರು ತೋರಿದ ಮಾರ್ಗದಲ್ಲಿ ನಡೆದು ಜನಪ್ರೀತಿ ಗಳಿಸಿದ್ದರು. ಮಠಾಧೀಶರೆಂದರೆ, ಸಮಾಜದ ಮಕ್ಕಳಿದ್ದಂತೆ. ಅನ್ನ ಕೊಡುವ ಸಮಾಜದ ಋಣವನ್ನು ತೀರಿಸಬೇಕಾದ್ದು ಅವರ ಆದ್ಯ ಕರ್ತವ್ಯ ಎಂದು ಹೇಳುತ್ತಿದ್ದರು.
ಭಕ್ತರು ಕರೆದಲ್ಲಿಗೆ ಹೋಗಿ ಅವರ ಕಣ್ಣೀರನ್ನು ಒರೆಸುತ್ತಿದ್ದ ಪಟ್ಟದ್ದೇವರು ವೈದ್ಯಗುರುವಾಗಿ, ಜನರ ಮೌಢ್ಯ ನಿವಾರಿಸುವಲ್ಲಿ ನಿರತರಾಗಿದ್ದರು. ಅನೇಕ ರೋಗಗಳಿಗೆ ತಮ್ಮದೇ ರೀತಿಯಲ್ಲಿ ಮದ್ದನ್ನು ನೀಡಿ ಗುಣಪಡಿಸುತ್ತಿದ್ದುದು ಅವರ ವೈಶಿಷ್ಟ್ಯವಾಗಿತ್ತು. ಅತ್ಯಂತ ಸರಳರಾಗಿದ್ದ ಅವರನ್ನು ಕಾಣಲು ದೂರದೂರದಿಂದ ಜನ ಜಾತಿ ಬೇಧವಿಲ್ಲದೆ ಆಗಮಿಸಿ ಅವರ ಕೃಪೆಗೆ ಪಾತ್ರರಾಗುತ್ತಿದ್ದರು.
 ಒಮ್ಮೆ ಭಕ್ತರೊಬ್ಬರ ಮನೆಯಲ್ಲಿ ನವಗ್ರಹ ಪೂಜೆ, ಜಪ ನಡೆಸಿದ್ದರು. ಆಗ ನಾಯಿಯೊಂದು ಎಲ್ಲಿಂದಲೋ ಬಂದು ಎಡೆಯನ್ನೂ, ಒಂದು ಬಟ್ಟಲು ಕೊಬ್ಬರಿಯನ್ನೂ ಎತ್ತೊಯ್ದಿತು. ಅದನ್ನು ನೋಡಿದ ಮನೆ ಯಜಮಾನ ಹೌಹಾರಿದ. ಏನೋ ಅನಿಷ್ಟ ಕಾದಿದೆಯೆಂದು ಬಗೆದ. ಅದಕ್ಕೆ ಪಟ್ಟದ್ದೇವರು, ಅದಕ್ಕಾಗಿ ಚಿಂತಿಸುವ ಪ್ರಮೇಯವಿಲ್ಲವೆಂದೂ, ನಾಯಿ ನಿಮ್ಮ ಕರ್ಮವನ್ನು ಮತ್ತು ಪಾಪವನ್ನು ಕಚ್ಚಿಕೊಂಡು ಹಿತ್ತಲ ಬಾಗಿಲಿಂದ ಹೋಯಿತೆಂದು ಭಾವಿಸಬೇಕೆಂದು ಸಮಾಧಾನಪಡಿಸಿದರು. ಇನ್ನೊಮ್ಮೆ ಮತ್ತೊಬ್ಬ ಭಕ್ತರ ಮನೆಗೆ ಪಟ್ಟದ್ದೇವರು ತೆರಳಿದರು. ಅವರಿಗೆ ಆ ಮನೆಯ ನವದಂಪತಿ ನಮಸ್ಕರಿಸುವಾಗ ಅಕಸ್ಮಾತ್ ವಧುವಿನ ಸೆರಗಿಗೆ ಬೆಂಕಿ ತಗಲಿಕೊಂಡಿತು. ಇದು ಒಳ್ಳೆಯ ಲಕ್ಷಣವಲ್ಲ, ಏನು ಕೆಡಕಾಗುವುದೋ ಎಂದು ಅಂದುಕೊಂಡಾಗ, ನೋಡಿ ನಿಮ್ಮ ಸೊಸೆಯ ಕಾಲ್ಗುಣ ಚೆನ್ನಾಗಿದೆ, ನಿಮಗಂಟಿದ ಶನಿ ಇವತ್ತು ಬಗೆಹರಿಯಿತು ಎಂದು ತಿಳಿಸಿ, ಮೂಢನಂಬಿಕೆಗಳಿಂದ ಬಾಳನ್ನು ಹಾಳುಮಾಡಿಕೊಳ್ಳಬೇಡಿ ಎಂದು ಅಲ್ಲಿ ನೆರದಿದ್ದವರಿಗೆ ಬೋಧಿಸಿದರು. ತಮಗೆ ಬಂದ ಕಾಣಿಕೆಯನ್ನೆಲ್ಲಾ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಸಮಾಜ ಸೇವೆಗೆ ವಿನಿಯೋಗಿಸಿ ಎಲ್ಲರ ಆದರಕ್ಕೆ ಪಾತ್ರರಾಗಿದ್ದರು. ಅವರು ಯಾವಾಗಲೂ ತಾವೊಬ್ಬ ಬಡ ಸ್ವಾಮಿ, ಸಮಾಜ ಸೇವಕ ಎಂದು ಹೇಳುತ್ತಿದ್ದರು. ಹಣಕ್ಕಾಗಿ ಎಂದಿಗೂ ಆಸೆಪಡಲಿಲ್ಲ. ಮಠಗಳು ಧಾರ್ಮಿಕ ಕೇಂದ್ರವಾಗಿರಬೇಕೇ ಹೊರತು ಭಕ್ತರ ಶೋಷಣೆ ಮಾಡಿ ಹಣ ಸಂಪಾದಿಸುವುದಕ್ಕಲ್ಲ ಎಂದು ಸದಾ ಹೇಳುತ್ತಿದ್ದರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ