ಕಾಡಿನಲ್ಲಿ ಅಲೆಯುತ್ತಿದ್ದ ಕೋಲ್ಯನ ಎದುರು ಹುಲಿಯೊಂದು ಗರ್ಜಿಸುತ್ತಾ ಬಂದು ನಿಂತಿತು. ಕೋಲ್ಯ ಉಗುಳು ನುಂಗಿಕೊಂಡು ಮೇಲೆ ನೋಡಿ ಕೂಗಿದ: "ಅಯ್ಯೋ, ದೇವರೆ ನಾನಂತೂ ಸತ್ತೆ"
ದೇವರು ಕೂಡಲೇ ಕೋಲ್ಯನ ಕೂಗಿಗೆ ಓಗೊಟ್ಟ. ಆಕಾಶವಾಣಿಯಾಯಿತು: "ಒಂದು ಕೆಲಸ ಮಾಡು ಕೋಲ್ಯ, ಒಂದು ಕಲ್ಲು ಎತ್ತಿಕೊಂಡು ಆ ಹುಲಿಯ ತಲೆಗೆ ಹೊಡಿ!"
ಕೋಲ್ಯ ಕೂಡಲೇ ಹುಲಿಗೆ ಕಲ್ಲೆಸೆದ
ಮತ್ತೆ ಆಕಾಶವಾಣಿಯಾಯಿತು: ಮಗನೇ, ಈಗ ಸಾಯ್ತೀಯ!