ಕೋಲ್ಯ ತನ್ನ ಮಗ ಮರಿಕೋಲ್ಯನನ್ನು ಹಿಡಿದು ಚೆನ್ನಾಗಿ ತದುಕುತ್ತಿದ್ದ. ನೆರೆ ಮನೆಯವರೊಬ್ಬರು ಇದನ್ನು ನೋಡಿ ಕೋಲ್ಯನನ್ನು ಕೇಳಿದರು: 'ಯಾಕ್ರೀ ಹಾಗ್ ಹೊಡಿತಿದೀರಾ ಅವನನ್ನ?'
ಕೋಲ್ಯ: ಅದೇನಂದ್ರೆ ಸಾರ್, ನಾಳೆ ಇವರ ರಿಸಲ್ಟ್ ಬರುತ್ತೆ. ಆದ್ರೆ ಇವತ್ತು ರಾತ್ರಿ ನಾನು ಬೆಂಗಳೂರಿಗೆ ಹೊರಟಿದೀನಿ. ಅದಕ್ಕೇ ನಾಳೆ ಕೆಲಸ ಇವತ್ತೇ ಮಾಡಿಬಿಡೋಣ ಅಂತ...