ಸ್ವಾರಸ್ಯ

ಸ್ಪೀಡ್ ಪೋಸ್ಟ್ ಮೂಲಕ ಈ ಬಾರಿ ಅಂಚೆ ಬ್ಯಾಲಟ್ ವರ್ಗಾವಣೆ

Sumana Upadhyaya
ಬೆಂಗಳೂರು: ಅಂಚೆ ಮತದಾನ ನಿಷ್ಟ್ರಯೋಜಕವಾಗದಂತೆ ತಡೆಯಲು ಈ ಬಾರಿ ಕೇಂದ್ರ ಚುನಾವಣಾ ಆಯೋಗ ಸ್ಪೀಡ್ ಪೋಸ್ಟ್ ಮೂಲಕ ಮತದಾನ ಕಳುಹಿಸುವ ವ್ಯವಸ್ಥೆಯನ್ನು ಮಾಡಿದೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆಗೆ ಆಯೋಗ ತಾತ್ವಿಕ ಒಪ್ಪಿಗೆ ನೀಡಿದೆ.
ಕರ್ನಾಟಕ ಅಂಚೆ ವೃತ್ತ ಅಂಚೆ ಮತದಾನವನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ನೈರುತ್ಯ ರೈಲ್ವೆ ಮತ್ತು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಕ್ಕೆ ಕೊಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ವೃತ್ತ ಮುಖ್ಯ ಅಂಚೆ ಪ್ರಧಾನ ವ್ಯವಸ್ಥಾಪಕ ಚಾರ್ಲ್ಸ್ ಲೊಬೊ, ಸ್ಪೀಡ್ ಪೋಸ್ಟ್ ಮೂಲಕ ಯಾವುದೇ ವಸ್ತು ಸಾಗಾಟವಾದರೆ ಅದನ್ನು ಕಳುಹಿಸಿದವರ ಮತ್ತು ಸ್ವೀಕರಿಸಿದವರನ್ನು ಪತ್ತೆಹಚ್ಚಲಾಗುತ್ತದೆ. ಇದರಿಂದ ಬ್ಯಾಲೆಟ್ ಪೇಪರ್ ಕಳೆದುಹೋಗುವ ಅಥವಾ ಆಚೀಚೆ ಆಗುವ ಸಾಧ್ಯತೆಯಿಲ್ಲ. ಕೆಲವೊಮ್ಮೆ ಮತ ಎಣಿಕೆಯ ಮರುದಿನ ಪೋಸ್ಟಲ್ ಬ್ಯಾಲಟ್ ತಲುಪಿದ ಉದಾಹರಣೆಗಳಿವೆ. ಸ್ಪೀಡ್ ಪೋಸ್ಟ್ ಮೂಲಕ ವೇಗವಾಗಿ ಬ್ಯಾಲೆಟ್ ಪೇಪರ್ ತಲುಪಲಿದೆ ಎಂದರು.
SCROLL FOR NEXT