ಬಾಗಲಕೋಟೆ: ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಕಾವು ಸಹ ಏರುತ್ತಿದೆ. ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಲು ಎಲ್ಲಾ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾರೀ ಉತ್ಸಾಹದಿಂದ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಭಾಗದ ಪ್ರಮುಖ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಖಾಸಗಿ ಸಂಸ್ಥೆಗಳು , ರಾಜಕೀಯ ಏತರ ಸಂಗಟನೆಗಳ ಮೊರೆ ಹೋಗಿದೆ. ಅವರು ಹೊರಗುತ್ತಿಗೆ ಆಧಾರದ ಮೇಲೆ ಪ್ರಚಾರಕಾರ್ಯಕ್ಕೆ ಸಹಕರಿಸಲು ಸಂಘಸಂಸ್ಥೆಗಳಿಗೆ ವಿನಂತಿ ಮಾಡಿದ್ದಾರೆ.
ತಮ್ಮ ಪಕ್ಷದ ಅಭ್ಯರ್ಥಿಯ ವಿಜಯವನ್ನು ಖಾತ್ರಿಪಡಿಸಿಕೊಳ್ಳಬೇಕಾಗಿರುವ ಹಿನ್ನೆಲೆ ಪ್ರತಿ ಪ್ರಚಾರ ಸಭೆಗೆ ಸಾವಿರಾರು ಸಂಖ್ಯೆಯ ಜನರನ್ನು ಸೇರಿಸಬೇಕಾಗುತ್ತದೆ. ಇದಕ್ಕಾಗಿ ನಾನಾ ಪಕ್ಷದ ಮುಖಂಡರು ಹೊರಗುತ್ತಿಗೆ ಆಧಾರದಲ್ಲಿ ಜನರನ್ನು ಕರೆತರುವ ಜವಾಬ್ದಾರಿಯನ್ನು ಹಲವು ಸಂಘಟನೆಗಳು, ಸಂಘ ಸಂಸ್ಥೆಗಳಿಗೆ ವಹಿಸಿದ್ದಾರೆ.. ನಾಯಕರ ಪ್ರಕಾರ, ಸ್ವಸಹಾಯ ಗುಂಪುಗಳು, ಎನ್ಜಿಒಗಳು ಮತ್ತು ಸ್ತ್ರೀಶಕ್ತಿ ಗುಂಪುಗಳು ಸೇರಿದಂತೆ ಸುಮಾರು 148 ಸಂಘಟನೆಗಳನ್ನು ಇದಕ್ಕಾಗಿ ಗಿತ್ತುಪಡಿಸಲಾಗಿದೆ.ಈ ಗುಂಪುಗಳೊಂದಿಗೆ ಕೆಲಸ ಮಾಡುವ ದಿನಗೂಲಿ ನೌಕರರು ರು ಮತ್ತು ಇತರ ಜನರು ಗ್ರಾಮೀಣ ಜನರನ್ನು ಸಮಾವೇಶ, ವಿವಿಧ ಸಭಾ ಕರ್ಯಕ್ರಮಗಳಿಗೆ ಃಆಜರಾಗಲು ಮುಂಗಡ ಪಾವತಿ ಮಾಡುತ್ತಾರೆ. ಇನ್ನು ಚುನಾವಣಾ-ಸಂಬಂಧಿತ ಕೆಲಸಕ್ಕಾಗಿ ನೇಮಕಗೊಂಡವರು ಕೂಡಾ ಉಚಿತ ಉಪಹಾರ ಮತ್ತು ಊಟ ಮತ್ತು ಸುಮಾರು 300 ರೂ. ದೈನಂದಿನ ಪಾವತಿಯನ್ನು ಪಡೆಯುತ್ತಾರೆ.
ಹೆಸರು ಹೇಳಲಿಚ್ಚಿಸದ ನಾಯಕರೊಬ್ಬರು ಹೇಳಿದಂತೆ ಖಾನಾಪುರ, ಬೆಳಗಾವಿ, ರಾಮದುರ್ಗ, ಗೋಕಾಕ ವಿಭಾಗದ ಕಾರ್ಮಿಕರು ಈಗಾಗಾಲೇ ಇಂತಹಾ ಸಮಾವೇಶಕ್ಕಾಗಿ ಹಣ ಪಡೆದಿದ್ದಾರೆ.. "ನಾವು ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಒಬ್ಬರಿಗೆ ದಿನಕ್ಕೆ ಊಟ, ಚಹಾದ ಹೊರತು ರೂ 280 ರಿಂದ 310ನ್ನು ನೀಡುತ್ತೇವೆ. ಆ ವೇಳೆ ಅವರು ಗ್ರಾಮಗಳಲ್ಲಿ ಅಭ್ಯರ್ಥಿಗಳು ನಡೆಸುವ ಸಭೆಗೆ ಕನಿಷ್ಟ ವ್ ಜನರು ಸೇರುವ ವ್ಯವಸ್ಥೆಯಾಗುತ್ತದೆ. "ಬೆಳಗಾವಿಯ ಸ್ವಸಹಾಯ ಗುಂಪಿನ ಸದಸ್ಯೆ ನಾಗಮ್ಮ ಹೇಳಿದ್ದಾರೆ.
ಸ್ಥಳೀಯ ನಾಯಕರು ಗ್ರಾಮೀಣ ಕುಟುಂಬಗಳಿಗೆ ರೇಷನ್ ಕಾರ್ಡ್ ನಂತಹಾ ಸೌಲಭ್ಯಗಳನ್ನು ಪಡೆಯುವಲ್ಲಿ ಸಹಾಯ ಮಾಡುತ್ತಾರೆ.100 ರಿಂದ 150 ಜನರನ್ನು ಕ್ಯಾನ್ವಾಸ್ ಗೆ ತರಲು ನನ್ನನ್ನು ಕೇಳಲಾಗಿತ್ತು ಮತ್ತು ಎಲ್ಲರಿಗೂ ಮುಂಚಿತವಾಗಿ ಪಾವತಿಸಲಾಗುವುದು ಎಂದು ಭರವಸೆ ನೀಡಿದ್ದರು ಎಂದು ಎನ್ಜಿಒ ಒಂದರ ಸಂಯೋಜಕರಾಗಿರುವ ರಾಮೋಜಿ ಕೆಳಗಡಿ ಹೇಳಿದ್ದಾರೆ. ಈರ್ವರಿಗೆ 300 ರೂ. ಪಾವತಿಸುವುದು ಸಾಕಷ್ಟಾಗಿದೆ. ಇದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ)ಕಾರ್ಮಿಕರೊಬ್ಬರ ದಿನದ ಕೂಲಿಗಿಂತ ಹೆಚ್ಚಾಗಿದೆ. ನರೇಗಾದಲ್ಲಿ ಒಬ್ಬರಿಒಗೆ ದಿನಕ್ಕೆ 224 ರೂ. ಹಣವನ್ನು ನೀಡಲಾಗುತ್ತದೆ.
"ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ನರೇಗಾ ಕಾರ್ಮಿಕರು ರಾಜಕೀಯ ಸಮಾವೇಶದಲ್ಲಿನ ಹೆಚಿನ ವೇತಗಳಿಂದ ಆಕರ್ಷಿತರಾಗಿದ್ದಾರೆ" ಎಂದು ಅನಾಮಧೇಯ ನಾಯಕರೊಬ್ಬರು ಹೇಳೀದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos