ಸುಮಲತಾ ಅಂಬರೀಷ್ 
ಸ್ವಾರಸ್ಯ

ಮಂಡ್ಯದಲ್ಲಿ ಸುಮಲತಾ ಗೆಲುವಿಗಾಗಿ ಅಂಬಿ ಅಭಿಮಾನಿಗಳ ವಿಶೇಷ ಪ್ಲಾನ್!

ಮಂಡ್ಯ ಲೋಕಸಭೆ ಚುನಾವಣೆಗೆ ನಟಿ ಸುಮಲತಾ ಅಂಬರೀಷ್ ನಾಮಪತ್ರ ಸಲ್ಲಿಸಿದ್ದಾರೆ, ನಾಮಪತ್ರ ಸಲ್ಲಿಕೆ ವೇಳೆ ಸಮರೋಪಾದಿಯಲ್ಲಿ ಜನ ಸೇರಿದ್ದರು. ಈಗ ಸದ್ಯ ...

ಮೈಸೂರು: ಮಂಡ್ಯ ಲೋಕಸಭೆ ಚುನಾವಣೆಗೆ ನಟಿ ಸುಮಲತಾ ಅಂಬರೀಷ್ ನಾಮಪತ್ರ ಸಲ್ಲಿಸಿದ್ದಾರೆ, ನಾಮಪತ್ರ ಸಲ್ಲಿಕೆ ವೇಳೆ ಸಮರೋಪಾದಿಯಲ್ಲಿ ಜನ ಸೇರಿದ್ದರು. ಈಗ ಸದ್ಯ ಅಂಬರೀಷ್ ಅಭಿಮಾನಿಗಳು ಸಮುಲತಾ ಗೆಲುವಿಗಾಗಿ ವಿಶೇಷ ತಂತ್ರ ರೂಪಿಸುತ್ತಿದ್ದಾರೆ.
ವಿರೋಧ ಪಕ್ಷಗಳಿಗೆ ಕೌಂಟರ್ ನೀಡಲು ಅಂಬಿ ಅಭಿಮಾನಿಗಳು, ತಮ್ಮದೇ ಆದ ತಂಡ ರಚಿಸಿಕೊಂಡು, ಬೂತ್ ಮಟ್ಟದಲ್ಲಿ ಪ್ರಚಾರಕ್ಕಿಳಿದಿದ್ದಾರೆ, ಸುಮಾರು 50 ಸಾವಿರ ಅಭಿಮಾನಿಗಳು, 2,030 ಬೂತ್ ಗಳಲ್ಲಿ ಮಂಡ್ಯಲೋಕಸಭಾ ಕ್ಷೇತ್ರದ 16 ಲಕ್ಷ ಮತದಾರರು ತಲುಪಿ ಪ್ರಚಾರಪ ಮಾಡುತ್ತಿದ್ದಾರೆ, 916 ಗ್ರಾಮಗಳಲ್ಲಿ ಅಂಬಿ ಅಭಿಮಾನಿಗಳ ಸಂಘ ಸ್ಥಾಪಿಸಲಾಗಿದೆ,
ಸುಮಾರು 50 ಲಕ್ಷ ಅಂಬರೀಷ್ ಅಭಿಮಾನಿಗಳು  ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸೋಮಶೇಖರ್ ಹೇಳಿದ್ದಾರೆ. ನಾವು ಎಲ್ಲರಿಗೂ ಕರೆ ಮಾಡಿ ಸುಮಲತಾ ಅವರ ಗೆಲುವಿಗಾಗಿ ಕೆಲಸ ಮಾಡುವಂತೆ ಮನವಿ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಅಂಬರೀಷ್ ಅಭಿಮಾನಿಗಳ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ, ಮತದಾರರ ಮೇಲೆ ಅಂಬಿ ಅಭಿಮಾನಿಗಳು ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಜೊತೆಗೆ ರೈತ ಸಂಘ ಕಾರ್ಯಕರ್ತರು ಸುಮಲತಾ ಅವರನ್ನು ಬೆಂಬಲಿಸುತ್ತಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.
ಮಂಡ್ಯದಲ್ಲಿ ಕಾಂಗ್ರೆಸ್ ಉಳಿಸಿಕೊಳ್ಳುವ ಸಲುವಾಗಿ ನಾವು ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ