ಸ್ವಾರಸ್ಯ

'ಚೌಕಿದಾರ್' ಆದ ಎಸ್‌ಪಿ, ಬಿಎಸ್‌ಪಿ ಕಾರ್ಯಕರ್ತರು: ಇದೇನು ಮೋದಿ ಪ್ರೇಮವೇ? ಇಲ್ಲಿದೆ ರೋಜಕ ಸಂಗತಿ!

Vishwanath S
ಮೀರತ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಬದ್ಧ ವೈರಿಗಳಾಗಿದ್ದ ಎಸ್‌ಪಿ, ಬಿಎಸ್‌ಪಿ ಪಕ್ಷಗಳು ಇದೀಗ ಒಂದಾಗಿ ಚುನಾವಣೆ ಎದುರಿಸಿದ್ದು ಮತದಾನ ನಡೆದ ಬೆನ್ನಲ್ಲೇ ಇದೀಗ ಎಸ್‌ಪಿ, ಬಿಎಸ್‌ಪಿ ಪಕ್ಷದ ಕಾರ್ಯಕರ್ತರು ಚೌಕಿದಾರ್ ಆಗಿ ಬದಲಾಗಿದ್ದಾರೆ.
ವಿಪಕ್ಷಗಳು ಇವಿಎಂ ತಿರುಚುವಿಕೆ ಕುರಿತು ಗಂಭೀರ ಆರೋಪಗಳನ್ನು ಮಾಡುತ್ತಿದ್ದು ಇದರ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ಕಾರ್ಯಕರ್ತರು ಮತಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗಳ ಮೇಲೆ ಹದ್ದಿನ ಕಣ್ಣಿಯುವ ಮೂಲಕ ಚೌಕಿದಾರ್ ಆಗಿ ಬದಲಾಗಿದ್ದಾರೆ.
ಮೀರತ್ ನಲ ಪಾರ್ತಾಪುರ್ ಪ್ರದೇಶದ್ಲಲಿ ಕಾಟೈ ಮಿಲ್ ನಲ್ಲಿ ಮತಯಂತ್ರಗಳನ್ನು ಇರಿಸಲಾಗಿದೆ. ಇನ್ನು ಇವಿಎಂ ತಿರುಚುತ್ತಾರೆ ಎಂಬ ಆತಂಕದಲ್ಲಿರುವ ಎಸ್‌ಪಿ, ಬಿಎಸ್‌ಪಿ ಕಾರ್ಯಕರ್ತರು 24X7 ಮೂರು ಪಾಳಿಯಲ್ಲಿ ತಂಡದ ಕಾರ್ಯಕರ್ತರು ಕಣ್ಗಾವಳಿಟ್ಟಿದ್ದಾರೆ.
ಏಪ್ರಿಲ್ 11ರಂದು ಮೀರತ್ ಲೋಕಸಭೆ ಚುನಾವಣೆಗೆ ಮತದಾನ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೂ ಎಸ್‌ಪಿ, ಬಿಎಸ್‌ಪಿ ಕಾರ್ಯಕರ್ತರು ಸ್ಟ್ರಾಂಗ್ ರೂಂ ಮೇಲೆ ಕಣ್ಣಿಟ್ಟಿದ್ದಾರೆ.
ಇದೇ ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
SCROLL FOR NEXT