ಸುಮಿತ್ರಾ ಮಹಾಜನ್ 
ದೇಶ

ಲೋಕಸಭೆ ಚುನಾವಣೆಗೆ ಸುಮಿತ್ರಾ ಮಹಾಜನ್ ಸ್ಪರ್ಧೆ ಇಲ್ಲ

ಲೋಕಸಭೆ ಸ್ಪೀಕರ್ ಹಾಗೂ ಮಧ್ಯಪ್ರದೇಶ ಇಂದೋರ್ ನಿಂದ ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸುಮಿತ್ರಾ ಮಹಾಜನ್ ಈ ಬಾರಿ ಸಂಸದೀಯ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.

ನವದೆಹಲಿ: ಲೋಕಸಭೆ ಸ್ಪೀಕರ್ ಹಾಗೂ ಮಧ್ಯಪ್ರದೇಶ ಇಂದೋರ್ ನಿಂದ ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸುಮಿತ್ರಾ ಮಹಾಜನ್ ಈ ಬಾರಿ ಸಂಸದೀಯ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಚುನಾವಣೆ ಸ್ಪರ್ಧೆಯ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲು ಪಕ್ಷಕ್ಕೆ ಸ್ವಾತಂತ್ರವಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ವಾರ 76ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುಮಿತ್ರಾ ಮಹಾಜನ್ ವಯಸ್ಸಿನ ಕಾರಣದಿಂದ ಚುನಾವಣಾ ಕಣದಿಂದ ಹೊರಗುಲಿಯಲಿದ್ದಾರೆ ಎನ್ನಲಾಗಿದೆ. 75 ವರ್ಷ ದಾಟಿದವರಿಗೆ ಚುನಾವಣೆ ಟಿಕೆಟ್ ನೀಡದಿರಲು ಬಿಜೆಪಿ ತೀರ್ಮಾನಿಸಿರುವುದು ಇದಕ್ಕೆ ಪೂರಕವಾಗಿದೆ.
"ನನ್ನ ಸ್ಪರ್ಧೆ ಕುರಿತು ಊಹಾಪೋಹಗಳಿದ್ದು ಅದನ್ನು ಕೊನೆಗೊಳಿಸಲು ನಾನೇ ಈ ಹೇಳಿಕೆ ನೀಡಿದ್ದೇನೆ. ನಾನು ಈ ಸಾಲಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ" ಇಂದೋರ್ ನಲ್ಲಿ ಮಹಾಜನ್ ಪಿಟಿಐ ಜತೆ ಮಾತನಾಡಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

'30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ,ಇನ್ನು ಸಾಧ್ಯವಿಲ್ಲ': ನಿವೃತ್ತಿಯ ಸುಳಿವು ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ಇಂಗಿತ!

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!