ದೇಶ

ಮತದಾನಕ್ಕೆ 48 ಗಂಟೆ ಮೊದಲು ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಣೆಗೆ ಚು.ಆ ಬ್ರೇಕ್

Sumana Upadhyaya
ನವದೆಹಲಿ: ಮಾಧ್ಯಮ ಪ್ರಮಾಣಪತ್ರ ಮತ್ತು ನಿರ್ವಹಣೆ ಸಮಿತಿ(ಎಂಸಿಎಂಸಿ)ಯಿಂದ ಪೂರ್ವ ಪ್ರಮಾಣೀಕರಿಸಿದ ಜಾಹೀರಾತುಗಳು ಹೊರತುಪಡಿಸಿ ಉಳಿದ ಯಾವುದೇ ರಾಜಕೀಯ ಜಾಹೀರಾತುಗಳನ್ನು ಮುದ್ರಣ ಮಾಧ್ಯಮಗಳಲ್ಲಿ ಮತದಾನದ ದಿನ ಮತ್ತು ಮತದಾನದ ಹಿಂದಿನ ದಿನ ಪ್ರಕಟಿಸುವುದಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
ಸಂವಿಧಾನದ 324ನೇ ಪರಿಚ್ಛೇದದಡಿ ಚುನಾವಣಾ ಆಯೋಗ ಈ ಆದೇಶ ನೀಡಿದ್ದು ಜನರನ್ನು ತಪ್ಪು ದಾರಿಗೆಳೆಯುವ, ನಿಂದನಕಾರಿಯಾದ ಅಥವಾ ದ್ವೇಷವನ್ನು ಹುಟ್ಟಿಸುವ ಯಾವುದೇ ಅಹಿತಕರ ಘಟನೆಗಳು ಮತದಾನದ ದಿನ ನಡೆಯದಂತೆ ಈ ಆದೇಶವನ್ನು ಚುನಾವಣಾ ಆಯೋಗ ಹೊರಡಿಸಿದೆ.
ಈ ಹಿಂದಿನ ಚುನಾವಣೆಗಳಲ್ಲಿ ಮತದಾನ ದಿನ ಮಾಧ್ಯಮಗಳಲ್ಲಿ ಜನರನ್ನು ರೊಚ್ಚಿಗೇಳಿಸುವ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳು ಪ್ರಕಟವಾಗಿರುವ ಉದಾಹರಣೆಗಳಿವೆ.
ಚುನಾವಣೆಯ ಕೊನೆ ಹಂತದ ಮತದಾನದ ವೇಳೆ ಇಂತಹ ಜಾಹೀರಾತುಗಳು ಇಡೀ ಚುನಾವಣಾ ಪ್ರಕ್ರಿಯೆಯನ್ನು ಹಾಳುಮಾಡುತ್ತದೆ. ಇಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಇಂತಹ ಸನ್ನಿವೇಶ ಸೃಷ್ಟಿಯಾದಾಗ ಸ್ಪಷ್ಟನೆ ನೀಡುವ ಅಥವಾ ಖಂಡಿಸುವ ಸ್ಥಿತಿಯಲ್ಲಿರುವುದಿಲ್ಲ ಎಂದು ಆಯೋಗ ಹೇಳಿದೆ.
SCROLL FOR NEXT