ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ತಮಿಳುನಾಡು ಅಥವಾ ಕೇರಳದಿಂದ ಸ್ಪರ್ಧಿಸಲು ಮೋದಿಗೆ ಧೈರ್ಯ ಇದೆಯಾ? ಶಶಿ ತರೂರ್

ಪ್ರಧಾನಿ ಮೋದಿಗೆ ತಮಿಳುನಾಡು ಅಥವಾ ಕೇರಳದಲ್ಲಿ ಸ್ಪರ್ಧಿಸುವ ಧೈರ್ಯ ಇದೆಯಾ ? ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಸವಾಲು ಹಾಕಿದ್ದಾರೆ

ಶಶಿ ತರೂರ್
Nagaraja AB
Updated On : 7 Apr 2019, 7:36 am

ತಿರುವನಂತಪುರಂ:ಕೇರಳದ ವೈನಾಡು ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವ ಮೂಲಕ ದಕ್ಷಿಣ ಹಾಗೂ ಉತ್ತರ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆಯನ್ನು ತೋರಿಸಿದ್ದಾರೆ. ಆದರೆ, ಪ್ರಧಾನಿ ಮೋದಿಗೆ ತಮಿಳುನಾಡು ಅಥವಾ ಕೇರಳದಲ್ಲಿ ಸ್ಪರ್ಧಿಸುವ ಧೈರ್ಯ ಇದೆಯಾ ? ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಸವಾಲು ಹಾಕಿದ್ದಾರೆ

ರಾಹುಲ್ ಗಾಂಧಿ ವೈನಾಡು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರಿಂದ ದಕ್ಷಿಣ ರಾಜ್ಯಾದ್ಯಂತ ಸ್ಪುಟವಾದ ಉತ್ಸಾಹ  ಕಂಡುಬರುತ್ತಿದೆ. ದೇಶದ ಮುಂದಿನ ಪ್ರಧಾನಿ ಅಲ್ಲಿಂದಲೇ ಗೆದ್ದು ಬರಲಿದ್ದಾರೆ ಎಂದು ತರೂರ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸೋಲುವ ಭಯದಿಂದ ರಾಹುಲ್ ಗಾಂಧಿ ಪಲಾಯನ ಮಾಡಿದ್ದಾರೆ ಎಂಬ ಬಿಜೆಪಿ  ಹಾಗೂ ಪ್ರಧಾನಿ ಮೋದಿ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಶಶಿ ತರೂರ್,  ಆಡಳಿತಾರೂಢ ಪಕ್ಷ ಪದೇ ಪದೇ ಸುಳ್ಳು ಹೇಳುತ್ತಿದೆ. ಹತಾಶೆಯಿಂದ ಮೋದಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಮಹಾರಾಷ್ಟ್ರದ ವಾರ್ದಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ಧ ಮೋದಿ, ಸೋಲುವ ಭಯದಿಂದಾಗಿ ರಾಹುಲ್ ಗಾಂಧಿ, ಮತ್ತೊಂದು ಕಡೆ ಸ್ಪರ್ಧಿಸುತ್ತಿದ್ದಾರೆ ಎಂದು ಟೀಕಿಸಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ  ದಕ್ಷಿಣ ರಾಜ್ಯಗಳೊಂದಿಗೆ ಹಲವು ವಿಷಯಗಳಲ್ಲಿ ನಿರಂಕುಶ ರೀತಿಯಲ್ಲಿ ನಡೆದುಕೊಂಡಿದೆ ಎಂದು ಶಶಿ ತರೂರ್ ಆರೋಪಿಸಿದರು.ರಾಹುಲ್ ಗಾಂಧಿ ಉತ್ತರದ ಅಮೇಥಿ ಹಾಗೂ ದಕ್ಷಿಣದ ವೈನಾಡು ಎರಡು ಕ್ಷೇತ್ರದಿಂದಲೂ ಗೆಲ್ಲಲಿದ್ದಾರೆ ಎಂದು ಶಶಿ ತರೂರ್ ವಿಶ್ವಾಸ ವ್ಯಕ್ತಪಡಿಸಿದರು

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement