ನವದೆಹಲಿ: ಭಾರತದ ಇತಿಹಾಸದಲ್ಲಿ 2014ರಿಂದ 2019ರವರೆಗೆ ಸುವರ್ಣಾಕ್ಷರಗಳಲ್ಲಿ ಬರೆದಿಡುವ ವರ್ಷವಾಗಿತ್ತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಅವರಿಂದು ದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿ ಲೋಕಸಭೆ ಚುನಾವಣೆ 2019ರ ಚುನಾವಣಾ ಪ್ರಣಾಳಿಕೆ ಸಂಕಲ್ಪ ಪತ್ರ ಬಿಡುಗಡೆ ಮುನ್ನ ಮಾತನಾಡಿದರು.ನಮ್ಮ ಪಕ್ಷದ ಸಂಕಲ್ಪ ಪತ್ರದಲ್ಲಿ ದೇಶದ ಜನರ ನಿರೀಕ್ಷೆಗಳನ್ನು ಈಡೇರಿಸುತ್ತದೆ ಎಂದರು.
ಭಾರತ ದೇಶಕ್ಕೆ ಪಾರದರ್ಶಕ, ಬಲಿಷ್ಠ ಮತ್ತು ನಿರ್ಧರಿತ ಸರ್ಕಾರವನ್ನು ಬಿಜೆಪಿ ನೀಡಲಿದ್ದು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಕಳೆದ 5 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ದೇಶ ವಿಶ್ವದಲ್ಲಿಯೇ ಸೂಪರ್ ಪವರ್ ಆಗಿ ಹೊರಹೊಮ್ಮಿದೆ. ದೇಶಕ್ಕೆ ಸುಭದ್ರ, ನಿರ್ಧರಿತ ಸರ್ಕಾರವನ್ನು ನೀಡುವತ್ತ ಕಳೆದ 5 ವರ್ಷಗಳಲ್ಲಿ ಬಿಜೆಪಿ ಕೆಲಸ ಮಾಡಿದೆ. ದೇಶದ ಆಶಾಭಾವನೆ ಇಂದು ನಿರೀಕ್ಷೆಯಾಗಿ ಬದಲಾಗಿದೆ. ಉಗ್ರರನ್ನು ದೇಶದಿಂದ ನಿರ್ನಾಮ ಮಾಡಲು ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಂತಹ ಮಹತ್ವದ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ, ಈ ಮೂಲಕ ಭಾರತವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ವಿಶ್ವಕ್ಕೆ ಮೋದಿಯವರು ಸಂದೇಶ ಸಾರಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics