ದೇಶ

91 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು, ಆಂಧ್ರ, ಸಿಕ್ಕಿಂ, ಒಡಿಶಾ ರಾಜ್ಯಗಳಲ್ಲಿ ಆಸೆಂಬ್ಲಿ ಚುನಾವಣೆ

Nagaraja AB
ನವದೆಹಲಿ:2 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 18 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.ಬೆಳಗ್ಗೆಯಿಂದಲೇ  ಮತದಾರರು ಸರತಿ ಸಾಲಿನಲ್ಲಿ ಮತಗಟ್ಟೆಗಳಿಗೆ  ಬಂದು ಮತ ಚಲಾಯಿಸುತ್ತಿದ್ದಾರೆ.
ನಿತಿನ್ ಗಡ್ಕರಿ, ಕಿರಣ್ ರಿಜಿಜು, ವಿಕೆ ಸಿಂಗ್ ಮತ್ತಿತರ ಕೇಂದ್ರ ಸಚಿವರ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ಪಶ್ಚಿಮ ಬಂಗಾಳ, ಜಮ್ಮು- ಕಾಶ್ಮೀರ, ಮೇಘಾಲಯದಲ್ಲಿ ತಲಾ ಎರಡು , ಮೀಜೋರಾಂ, ತ್ರಿಪುರಾ, ಮಣಿಪುರ, ನಾಗಲ್ಯಾಂಡ್,  ಸಿಕ್ಕಿಂ,  ಅಂಡಮಾನ್ ಮತ್ತು ನಿಕೋಬಾರ್ , ಮತ್ತು ಲಕ್ಷದ್ವೀಪದ ತಲಾ 1 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
ಮತಗಟ್ಟೆಗಳಲ್ಲಿ ಬಿಗಿ ಬಂಧೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ.
SCROLL FOR NEXT