ದೇಶ

ನಮೋ ಟಿವಿಯಲ್ಲಿ ಪ್ರಮಾಣೀಕರಿಸದ ಯಾವುದೇ ವಿಷಯಗಳ ಪ್ರಸಾರ ಬೇಡ: ಬಿಜೆಪಿಗೆ ದೆಹಲಿ ಚುಣಾವಣಾ ಆಯೋಗ ಆದೇಶ

Sumana Upadhyaya
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬೆಂಬಲಿತ ನಮೋ ಟಿವಿಯಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳನ್ನು ಪರಿಶೀಲಿಸಿ ಪ್ರಮಾಣೀಕರಿಸಿದ ನಂತರ ಪ್ರಸಾರ ಮಾಡಬೇಕು ಎಂದು ಚುನಾವಣಾ ಆಯೋಗ ಆದೇಶ ನೀಡಿದ ಎರಡು ದಿನಗಳ ನಂತರ ದೆಹಲಿ ಚುನಾವಣಾ ಆಯೋಗ ಕೂಡ ಆದೇಶ ನೀಡಿ ತನ್ನ ಪ್ರಮಾಣೀಕರಣ ಸಿಗದೆ ಬಿಜೆಪಿ ಯಾವುದೇ ಸುದ್ದಿ, ವಿಷಯಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಹೇಳಿದೆ.
ನಮೋ ಟಿವಿ ಭಾರತೀಯ ಜನತಾ ಪಾರ್ಟಿಯ ಪ್ರಾಯೋಜಕತ್ವ ಹೊಂದಿರುವುದರಿಂದ ಅದರಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳು ಮಾಧ್ಯಮ ಪ್ರಮಾಣೀಕರಣದಿಂದ ಮತ್ತು ದೆಹಲಿಯ ನಿರ್ವಹಣಾ ಸಮಿತಿಯಿಂದ ಪೂರ್ವ ಪ್ರಮಾಣ ಪಡೆದು ಪ್ರಸಾರ ಮಾಡಬೇಕು, ಪೂರ್ವಪ್ರಮಾಣೀಕರಣ ಇಲ್ಲದಿದ್ದರೆ ಆ ಕಾರ್ಯಕ್ರಮದ ಪ್ರಸಾರವನ್ನು ತಕ್ಷಣವೇ ನಿಲ್ಲಿಸಬೇಕೆಂದು ಎರಡು ದಿನಗಳ ಹಿಂದೆ ಭಾರತೀಯ ಚುನಾವಣಾ ಆಯೋಗ ಹೇಳಿತ್ತು.
ಚುನಾವಣಾ ಆಯೋಗದ ಆದೇಶದ ಪ್ರಕಾರ ದೆಹಲಿಯ ಮುಖ್ಯ ಚುನಾವಣಾಧಿಕಾರಿ ಬಿಜೆಪಿಗೆ ಪತ್ರ ಬರೆದು ಆಯೋಗದ ಒಪ್ಪಿಗೆ ಪಡೆಯದಿರುವ ಎಲ್ಲಾ ರಾಜಕೀಯ ವಿಷಯಗಳನ್ನು ತೆಗೆದುಹಾಕಲಾಗುವುದು ಎಂದರು. ಮುನ್ನೆಚ್ಚರಿಕೆ ಕ್ರಮವಾಗಿ ಇಬ್ಬರು ಅಧಿಕಾರಿಗಳನ್ನು ಪ್ರತಿನಿತ್ಯ ನಮೋ ಟಿವಿಯನ್ನು ನೋಡಲು ಮತ್ತು ಅದರಲ್ಲಿರುವ ವಿಷಯಗಳನ್ನು ನೋಡಲು ನಿಯೋಜಿಸಲಾಗಿದೆ ಎಂದರು.
ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಪೂರ್ವ ಪ್ರಮಾಣೀಕರಣಕ್ಕೆ ಸಾಮಾನ್ಯವಾಗಿ ಆಡಿಯೊವಿಷುವಲ್ ನ್ನು ಸಲ್ಲಿಸುತ್ತದೆ, ಆದರೆ ಅದು ಯಾವುದರಲ್ಲಿ ಪ್ರಸಾರವಾಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳುವುದಿಲ್ಲ. ರಾಜಕೀಯ ವಿಷಯಗಳು ರ್ಯಾಲಿಯಲ್ಲಿ ಅಥವಾ ಪಕ್ಷದ ವೆಬ್ ಸೈಟ್ ನಲ್ಲಿ ಪ್ರಸಾರವಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
SCROLL FOR NEXT