ಲಖನೌ: ಬಜರಂಗಬಲಿ, ಅಲಿ ಇಬ್ಬರೂ ನಮ್ಮವರೇ ಇಬ್ಬರೂ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ರಾಮಾಯಣದ ಬಜರಂಗಬಲಿ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದ ಎಂಬ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಯನ್ನೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಂದಿರುವ ಮಾಯಾವತಿ, ಬಜರಂಗಬಲಿಯನ್ನು ನನ್ನ ಸ್ವಂತ ದಲಿತ ಸಮುದಾಯಕ್ಕೆ ತಳುಕುಹಾಕಲಾಗಿದೆ. ಆದ್ದರಿಂದ ಬಜರಂಗಬಲಿ ನಮ್ಮವನೇ ಆಗಿದ್ದಾನೆ ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಲಿ (ಮುಸ್ಲಿಂ ಸಮುದಾಯದ ಮತಗಳು) ಬಿಎಸ್ ಪಿ-ಸಮಾಜವಾದಿ ಪಕ್ಷ- ಆರ್ ಎಲ್ ಡಿ ಜೊತೆ ಇದ್ದರೆ, ಬಜರಂಗಬಲಿ (ಹಿಂದೂ ಸಮುದಾಯದ ಮತಗಳು) ಭಾರತೀಯ ಜನತಾ ಪಕ್ಷದೊಂದಿಗೆ ಇದೆ ಎಂದು ಹೇಳಿದ್ದರು. ಈಗ ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಮಾಯಾವತಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಬಜರಂಗ ಬಲಿ, ಅಲಿ ಇಬ್ಬರೂ ನಮ್ಮವರೇ ಇಬ್ಬರೂ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಮಾಯಾವತಿ, ಯೋಗಿ ಆದಿತ್ಯನಾಥ್ ಇಬ್ಬರಿಗೂ ಚುನಾವಣಾ ಆಯೋಗ ನೊಟೀಸ್ ಜಾರಿಗೊಳಿಸಿದೆ.