ದೇಶ

ಜಯಪ್ರದಾ ಖಾಕಿ ಅಂಡರ್ ವೇರ್ ಧರಿಸುತ್ತಾರೆ; ಅಜಂಖಾನ್ ಹರಕುಬಾಯಿಯ ಕೊಳಕು ಮಾತು

Vishwanath S
ಲಖನೌ: ಉತ್ತರ ಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರ ವಿರುದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಕೀಳುಮಟ್ಟದ ಟೀಕೆ ಮಾಡಿದ್ದು, ಜಯಪ್ರದ ಖಾಕಿ ಅಂಡರ್ ವೇರ್ ಧರಿಸುತ್ತಾರೆ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಉತ್ತರ ಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದ ರ್ಯಾಲಿ ವೇಳೆ ಅಜಂ ಖಾನ್ ತಮ್ಮ ನಾಲಿಗೆ ಹರಿ ಬಿಟ್ಟಿದ್ದು, ಅದೂ ಕೂಡ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಸಮ್ಮುಖಜದಲ್ಲೇ ಇಂತಹ ಹೇಳಿಕೆ ನೀಡುವ ಮೂಲಕ ಅಜಂಖಾನ್ ತೀವ್ರ ಮುಜುಗರಕ್ಕೆ ಕಾರಣರಾಗಿದ್ದಾರೆ.
'ಜಯಪ್ರದಾ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೇ ನಾನು. ಇದೇ ರಾಂಪುರದಿಂದ ಆಕೆಗೆ ಟಿಕೆಟ್ ಕೊಡಿಸಿದ್ದೆ. ಆಕೆಯ ಬಾಡಿಗಾರ್ಡ್ ನಂತೆ ಆಕೆಯನ್ನು ಯಾರೂ ಕೂಡ ಸ್ಪರ್ಶಿಸದಂತೆ ನೋಡಿಕೊಂಡೆ. ಆದರೆ ಆಕೆಯ ನಿಜವಾದ ಮುಖವನ್ನು ತಿಳಿಯಲು ನನಗೆ 17 ವರ್ಷಗಳೇ ಬೇಕಾಯಿತು. 17 ದಿನಗಳ ಹಿಂದಷ್ಟೇ ಆಕೆ ಖಾಕಿ ಅಂಡರ್ ವೇರ್ ಧರಿಸುತ್ತಾರೆ ಎಂದು ತಿಳಿಯಿತು ಎಂದು ಅಜಂ ಖಾನ್ ಹೇಳಿದ್ದಾರೆ.
ಅಜಂಖಾನ್ ಅವರ ಈ ಹೇಳಿಕೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಮಹಿಳೆಯರ ಚಾರಿತ್ರ್ಯವಧೆ ಮಾಡುವಂತಹ ಹೇಳಿಕೆ ನೀಡಿದ ಅಜಂಖಾನ್ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. 2 ದಿನಗಳ ಹಿಂದಷ್ಟೇ ಜಯಪ್ರದಾ ಅವರು ಖಾನ್‌ ತಮ್ಮನ್ನು ಅವಮಾನ ಮಾಡಿದ್ದರ ಬಗ್ಗೆ ಸಾರ್ವಜನಿಕವಾಗಿ ಅಳಲು ತೋಡಿಕೊಂಡಿದ್ದರು.
SCROLL FOR NEXT