ದೇಶ

ಮೋದಿ ಪ್ರಚಾರಕ್ಕಾಗಿ ದೇಶಾದ್ಯಂತ ಜೆಟ್ಸ್, ಹೆಲಿಕಾಪ್ಟರ್ ಬುಕ್, ಗಂಟೆಗೆ 50 ಸಾವಿರ ವೆಚ್ಚ!

Lingaraj Badiger
ಬೆಂಗಳೂರು: ಇತ್ತೀಚಿಗಷ್ಟೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ಹೆಲಿಕಾಪ್ಟರ್‌ಗಳ “ಕೃತಕ ಅಭಾವ’ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪುಷ್ಠಿ ನೀಡುವಂತಹ ಮಾಹಿತಿ ಈಗ ಹೊರಬಿದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ದೇಶಾದ್ಯಂತ ಬಹುತೇಕ ಎಲ್ಲಾ ಜೆಟ್ಸ್ ಮತ್ತು ಹೆಲಿಕಾಪ್ಟರ್ ಗಳನ್ನು ಬುಕ್ ಮಾಡಿದೆ.
ಬಿಜೆಪಿ ಚುನಾವಣೆ ಘೋಷಣೆಯಾಗುವ 45 ದಿನಗಳ ಮುನ್ನವೇ ಜೆಟ್ಸ್ ಹಾಗೂ ಹೆಲಿಕಾಪ್ಟರ್ ಗಳನ್ನು ಬುಕ್ ಮಾಡಿದ್ದು, ಇದಕ್ಕಾಗಿ ಗಂಟೆಗೆ ಸುಮಾರು 50 ಸಾವಿರ ರುಪಾಯಿ ವೆಚ್ಚ ಮಾಡುತ್ತಿದೆ.
ಭಾರತದ ಬಹುದೊಡ್ಡ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಖಾಸಗಿ ಜೆಟ್ ಮತ್ತು ಹೆಲಿಕಾಪ್ಟರ್ ಗಳನ್ನು ಭಾರಿ ಪ್ರಮಾಣದಲ್ಲಿ ಬಳಸುತ್ತಿದ್ದು, ಬಿಜೆಪಿ ಮತ್ತು ಪ್ರತಿಸ್ಪರ್ಧಿ ಕಾಂಗ್ರೆಸ್ ಎರಡೂ ಪಕ್ಷಗಳು ದೇಶದ ಎಲ್ಲಾ ಮತದಾರರನ್ನು ತಲುಪಲು ಯತ್ನಿಸುತ್ತಿವೆ. ಹೀಗಾಗಿಯೇ ಶ್ರೀಮಂತ ಬಿಜೆಪಿ ಮೂರು ತಿಂಗಳ ಹಿಂದೆಯೇ ದೇಶದಲ್ಲಿ ಲಭ್ಯವಿರುವ ಎಲ್ಲಾ ಖಾಸಗಿ ಹೆಲಿಕಾಪ್ಟರ್ ಮತ್ತು ಜೆಟ್ ಗಳನ್ನು ಬುಕ್ ಮಾಡಿದೆ. 
ದೇಶದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಬೇಕಾದ ಅಗತ್ಯ ಹೆಲಿಕಾಪ್ಟರ್ ಮತ್ತು ಜೆಟ್ಸ್ ಗಳ ಕೊರತೆ ಇದೆ. ಈ ಮಧ್ಯೆ ಬಿಜೆಪಿ 20 ಜೆಟ್ ಗಳನ್ನು ಹಾಗೂ 30 ಹೆಲಿಕಾಪ್ಟರ್ ಗಳನ್ನು ಬುಕ್ ಮಾಡಿದೆ. ಕಾಂಗ್ರೆಸ್ ಸಿಕ್ಕಿದ್ದು ಕೇವಲು ಐದು ಹೆಲಿಕಾಪ್ಟರ್ ಮಾತ್ರ.
ಎಲ್ಲಾ ರೀತಿಯಲ್ಲೂ ಪ್ರತಿಸ್ಪರ್ಧಿಗಳ ಪ್ರಚಾರಕ್ಕೆ ಅಡ್ಡಿಪಡಿಸುವುದರಲ್ಲಿ ಭಾರತೀಯ ಚುನಾವಣೆ ಫೇಮಸ್. ಆದರೆ ಅದು 'ಆಕಾಶ'ಕ್ಕೆ ಯಾವತ್ತೂ ವಿಸ್ತರಿಸಿರಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ಸ್ಪರ್ಧೆ ನಡೆಯುತ್ತಿದೆ ಎಂದು ಬ್ಯುಸಿನೆಸ್ ಏರ್ ಕ್ರಾಫ್ಟ್ ಆಪರೇಟರ್ಸ್ ಅಸೋಸಿಯೇಶನ್ ಸಲಹೆಗಾರ ಹಾಗೂ ಮಾರ್ಟಿನ್ ಕನ್ಸಲ್ಟಿಂಗ್ ಸಂಸ್ಥಾಪಕ ಮಾರ್ಕ್ ಮಾರ್ಟಿನ್ ಅವರು ಹೇಳಿದ್ದಾರೆ.
SCROLL FOR NEXT