ದೇಶ

ಸಮಾಜವಾದಿ ಪಕ್ಷದ ಅಜಮ್ ಖಾನ್‌ 'ಮೊಗಾಂಬೊ' ಎಂದಿದ್ದ ಕೇಂದ್ರ ಸಚಿವ ನಖ್ವಿ ವಿರುದ್ಧ ಎಫ್ಐಆರ್

Raghavendra Adiga
ರಾಂಪುರ್: ಸಮಾಜವಾದಿ ಪಕ್ಷದ ಅಜಂ ಖಾನ್ ಅವರನ್ನು "ಮೊಗಾಂಬೊ" ಎಂದು ಕರೆದದ್ದಾಗಿ ಆರೋಪಿಸಿ ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಬಾಲಿವುಡ್ ಜನಪ್ರಿಯ ಖಳನಾಯಕ  "ಮೊಗಾಂಬೊ"  ಎಂಬ ಹೆಸರಿನಿಂದ ಅಜಂ ಕಾನ್ ಅವರನ್ನು ಕರೆದಿದ್ದು  ಸೋಮವಾರ ರಾಂಪುರ್ದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಖಾನ್ ಅವರನ್ನು ಉಲ್ಲೇಖಿಸುತ್ತಾ ಅನಖ್ವಿ ಈ ಮಾತು ಹೇಳಿದ್ದಾರೆ.
ರಾಂಪುರ  ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (ಎಎಸ್ಪಿ) ಅರುಣ್ ಕುಮಾರ್ ಸಿಂಗ್ "ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿಕೆ ಕುರಿತು ರ್ಯಾಲಿ ಮೇಲ್ವಿಚಾರಣೆ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ಅವರು ಎನ್ಸಿಆರ್  ದಾಖಲೆಗಳನ್ನು ಆಧರಿಸಿ  ದೂರು ನೀಡಿದ್ದರು." ಏಂದು ವಿವರಿಸಿದ್ದಾರೆ. ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ಎಮ್ ಕೆ ಗುಪ್ತಾ ಅವರ ಆದೇಶದ ಮೇಲೆ ದಾಖಲಿಸಲಾಗಿದೆ.
ಸೋಮವಾರದ ರ್ಯಾಲಿಯಲ್ಲಿ ನಖ್ವಿ ಖಾನ್ ಅವರನ್ನು "ಮೊಗಾಂಬೋ" ಎಂದು ಕರೆದಿದ್ದು ಇದು ಜನಸಮುದಾಯದಲ್ಲಿ  ದ್ವೇಷವನ್ನು ಉಂಟುಮಾಡಬಹುದು ಮತ್ತು ಇದು ಮಾದರಿನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಮ್ಯಾಜಿಸ್ಟ್ರೇಟ್ ಗುಪ್ತಾ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
SCROLL FOR NEXT