ದೇಶ

ಮುಲಾಯಂ ಪ್ರಧಾನಿ ಮೋದಿಯಂತಲ್ಲ, ನಿರ್ಲಕ್ಷಿತರ ಪರ ನಿಜವಾದ ಕಾಳಜಿ ಇದೆ: ಮಾಯಾವತಿ

Sumana Upadhyaya
ಲಕ್ನೋ: ಒಂದು ಕಾಲದಲ್ಲಿ ರಾಜಕೀಯ ಶತ್ರುವಾಗಿದ್ದ ಸಮಾಜವಾದಿ ಪಕ್ಷ ಮತ್ತು ಅದರ ನಾಯಕ ಮುಲಾಯಂ ಸಿಂಗ್ ಯಾದವ್ ಅವರಿಗೆ ಮತ ಹಾಕುವಂತೆ ಬಿಎಸ್ಪಿ ನಾಯಕಿ ಮಾಯಾವತಿ ಮೈನ್ಪುರಿ ಜನತೆಯನ್ನು ಶುಕ್ರವಾರ ಕೋರಿಕೊಂಡಿದ್ದಾರೆ.
24 ವರ್ಷಗಳ ಹಗೆತನ, ಮುನಿಸು ಕೊನೆಗೂ ಅಂತ್ಯವಾಗಿ ಇಂದು ಮುಲಾಯಂ ಸಿಂಗ್ ಯಾದವ್ ಮತ್ತು ಮಾಯಾವತಿ ಒಂದೇ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ಜನತೆಯಲ್ಲಿ ಹೊಸ ರಾಜಕೀಯ ಉದಯದ ಸೂಚನೆಯನ್ನು ನೀಡಿದರು.
ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಬಿಎಸ್ಪಿ ಮತ್ತು ಎಸ್ಪಿ ಒಂದಾಗಿರುವುದಾಗಿ ಮಾಯಾವತಿ ಹೇಳಿದ್ದಾರೆ. ಪ್ರಧಾನಿ ಮೋದಿ ಒಬ್ಬ ನಕಲಿ ಹಿಂದುಳಿದ ನಾಯಕರಾಗಿದ್ದಾರೆ, ಆದರೆ ಮುಲಾಯಂ ಸಿಂಗ್ ಯಾದವ್ ಅವರು ಪ್ರಾಮಾಣಿಕವಾಗಿ ಸಮಾಜದ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರ ಉದ್ದಾರಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು. ಅವರ ಪುತ್ರ ಮಾಜಿ ಸಿಎಂ ಅಖಿಲೇಶ್ ಯಾದವ್ ಕೂಡ ಒಬ್ಬ ನಿಜವಾದ ಧೀಮಂತ ನಾಯಕ ಎಂದು ಹೊಗಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದ ಮಾಯಾವತಿ, ನಾವು ಬಿಜೆಪಿಯವರಂತೆ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ, ಸುಳ್ಳು ಹೇಳುವುದು, ನಾಟಕ ಮಾಡುವುದರಿಂದ ಕೆಲಸ ಸಾಗುವುದಿಲ್ಲ ಎಂದರು.
SCROLL FOR NEXT