ಉತ್ತರ ಪ್ರದೇಶದ ಬರಬಂಕಿ ಉನ್ನಾವೊದಲ್ಲಿ ನಿನ್ನೆ ರೋಡ್ ಶೋ ನಡೆಸಿದ ಪ್ರಿಯಾಂಕಾ ಗಾಂಧಿ
ಉನ್ನಾವೊ/ ಬರಬಂಕಿ: ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯ ಒಂದೇ ಒಂದು ಗ್ರಾಮಕ್ಕೆ ಸಹ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಗಾಂಧಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಬರಬಂಕಿಯ ಉನ್ನಾವೊ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅನ್ನು ಟಂಡನ್ ಅವರ ಪರವಾಗಿ ನಿನ್ನೆ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ ಮಾತನಾಡಿ ಪ್ರಧಾನಿ ಮೋದಿ ಜಗತ್ತಿನೆಲ್ಲೆಡೆ ಸುತ್ತುತ್ತಾರೆ. ತಮ್ಮ ಕ್ಷೇತ್ರ ವಾರಣಾಸಿಯಲ್ಲಿ ಬೋಟ್ ನಲ್ಲಿ ಪ್ರಯಾಣಿಸುತ್ತಾರೆ, ಆದರೆ ತಮ್ಮ ಕ್ಷೇತ್ರದ ಒಂದೇ ಒಂದು ಗ್ರಾಮಕ್ಕೆ ಸಹ ಭೇಟಿ ನೀಡಿಲ್ಲ ಎಂದು ಹೇಳಿದರು.
ತಮ್ಮ ಕ್ಷೇತ್ರದ ಗ್ರಾಮಗಳಿಗೆ ಪ್ರಧಾನಿಯವರು ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಬೇಕಾಗಿತ್ತು. ಅವರ ಪರಿಸ್ಥಿತಿಗಳನ್ನು ವಾಸ್ತವ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು. ಆದರೆ ಆ ಕೆಲಸ ಕಳೆದ 5 ವರ್ಷಗಳಲ್ಲಿ ಮಾಡಲಿಲ್ಲ ಎಂದರು.
ಪ್ರಿಯಾಂಕಾ ಗಾಂಧಿ ಈ ಹಿಂದೆ ಕೂಡ ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಿದ್ದರು. ಆಗ ಅವರು ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಪಕ್ಷ ಕೊನೆ ಕ್ಷಣದಲ್ಲಿ ಅಜಯ್ ರೈ ಅವರನ್ನು ಕಣಕ್ಕಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics