ಹಾರ್ಡಯ್ : ಜಾತಿ ಕಾರ್ಡ್ ಪ್ರಯೋಗಿಸಿ ಹಣ ಲೂಟಿ ಮಾಡುವುದೇ ಎಸ್ಪಿ- ಬಿಎಸ್ಪಿ ಹಾಗೂ ಆರ್ ಎಲ್ ಡಿ ಮೈತ್ರಿಯ ಮಂತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಸಹಾಯಕರ ಸರ್ಕಾರವನ್ನು ಬಯಸುವ "ಅವಕಾಶವಾದಿಗಳು ಎಂದು ಈ ಮೈತ್ರಿಯನ್ನು ಬಣ್ಣಿಸಿದರು. ಬಿಆರ್ ಅಂಬೇಡ್ಕರ್ ವಿರೋಧಿಸುತ್ತಿದ್ದವರ ಹೆಸರಿನಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತಗಳನ್ನು ಕೇಳುತ್ತಿದ್ದಾರೆ ಎಂದರು.
ಅಂಬೇಡ್ಕರ್ ಹೆಸರಿನಲ್ಲಿ ಮತಗಳನ್ನು ಕೇಳುವವರು ಅವರ ಜೀವನದಿಂದ ಏನನ್ನೂ ಕಲಿತಿಲ್ಲ. ಅಧಿಕಾರದ ಆಸೆಯಿಂದ ಮಾಯಾವತಿ ಅಂಬೇಡ್ಕರ್ ವಿರೋಧಿಸುತ್ತಿದ್ದವರಿಂದ ಮತಗಳನ್ನು ಕೇಳುತ್ತಿದ್ದಾರೆ. ಜಾತಿ ಆಧಾರದ ಮೇಲೆ ರಾಜಕೀಯ ಮಾಡುವವರು ದೇಶದ ಬಗ್ಗೆ ಗಮನ ನೀಡಲ್ಲ. ಹಣ ಲೂಟಿ ಮಾಡುವ ಉದ್ದೇಶದಿಂದ ಇವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು
ಯುಪಿಎ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ದೇಶದಲ್ಲಿ ಇದೀಗ ಎಲ್ಲೆಡೆ ಇಂಟರ್ನೆಟ್ ಸಿಗುವಂತಾಗಿದೆ.ರಿಮೋಟ್ ಕಂಟ್ರೋಲ್ ಸರ್ಕಾರದ ಅವಧಿಯಲ್ಲಿ ಇದರ ಕೊರತೆಯಿತ್ತು. ಪ್ರಧಾನಿ ಯಾಗುವ ಮುನ್ನ ಭಾರತದಲ್ಲಿ ಕೇವಲ 2 ಕಂಪನಿಗಳು ಮೊಬೈಲ್ ತಯಾರಿಸುತ್ತಿದ್ದವು. ಈಗ 125ಕ್ಕೂ ಹೆಚ್ಚು ಕಂಪನಿಗಳು ಮೊಬೈಲ್ ತಯಾರಿಸುತ್ತಿವೆ ಎಂದು ಹೇಳಿದರು