ದೇಶ

ಎರಡು ವೋಟರ್ ಐಡಿ ಹೊಂದಿದ ಆರೋಪ: ಕೇಜ್ರಿವಾಲ್ ಪತ್ನಿ ವಿರುದ್ಧ ದೂರು

Lingaraj Badiger
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್, ಎರಡು ವೋಟರ್ ಐಡಿ ಹೊಂದಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡ ಹರೀಶ್ ಖುರಾನಾ ಅವರು ತೀಸ್ ಹಜಾರ್ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಖುರಾನಾ, ಗಾಜಿಯಾಬಾದ್ ಸಂಸದೀಯ ಕ್ಷೇತ್ರದ ಸಾಹಿಬಾದ್ ಹಾಗೂ ಚಾಂದನಿ ಚೌಕ್ ನ ಲೋಕಸಭಾ ಕ್ಷೇತ್ರ ಪ್ರದೇಶ ವ್ಯಾಪಿಯಲ್ಲಿ ಎರಡು ಕಡೆ ಸುನೀತಾ ಅವರು ಮತದಾನ ಗುರುತು ಪತ್ರ ಹೊಂದಿದ್ದಾರೆಂದು ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ದೆಹಲಿ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭಿರ್ ವಿರುದ್ಧ ಎರಡು ಮತದಾನದ ಗುರುತು ಪತ್ರ ಹೊಂದಿದ್ದಾರೆಂದು ಆಮ್ ಆದ್ಮಿ ಪಕ್ಷ ದೂರು ಸಲ್ಲಿಸಿತ್ತು. ಇದೀಗ ಆಮ್ ಆದಿ ಪಕ್ಷವೇ ಇಂತಹ  ಪ್ರಕರಣದಲ್ಲಿ ಸಿಲುಕಿಕೊಂಡಿದೆ. 
ದೆಹಲಿಯ ಆಪ್ ಪಕ್ಷದ ಅಭ್ಯರ್ಥಿ ಆತೀಶಿ ಮಾರ್ಲಿನಾ ಏ.26ರಂದು ಗೌತಮ್ ಗಂಭೀರ್, ಎರಡು ಕಡೆ ಮತದಾನ ಪತ್ರ ಹೊಂದಿದ್ದಾರೆಂದು ಆರೋಪಿಸಿದ್ದರು.
ಮೇ 12 ರಂದು ದೆಹಲಿಯಲ್ಲಿ ಲೋಕಸಭೆಯ ಏಳು ಸ್ಥಾನಕ್ಕಾಗಿ ಆರನೇ ಹಂತದ ಮತದಾನ ನಡೆಯಲಿದ್ದು, ದೆಹಲಿಯ ಮಾಜಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಕೂಡ ಈ ಬಾರಿ ಚುನಾವಣಾ ಕಣದಲ್ಲಿದ್ದಾರೆ.
SCROLL FOR NEXT