ಭೂಪಾಲ್ : ಪ್ರತ್ಯೇಕ ಘಟನೆಗಳಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಒಬ್ಬ ಮಹಿಳೆ ಸೇರಿದಂತೆ ಮೂವರು ಸರ್ಕಾರಿ ಸಿಬ್ಬಂದಿ ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಚಿಂದ್ ವಾರಾ ಲೋಕಸಭಾ ಕ್ಷೇತ್ರದ ಸನ್ ಸರ್ ಪ್ರದೇಶದ ಲೊದಿಕೇಡಾ ಮತಗಟ್ಟೆ ಸಿಬ್ಬಂದಿಯಾಗಿ ನಿಯೋಜಿಸಲಾಗಿದ್ದ ಸುನಂದಾ ಕೊಟೆಕಾರ್ (50 ) ಹೃದಯಾಘಾತದಿಂದ ಕಳೆದ ರಾತ್ರಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿಎಲ್ ಕಾಂತಾ ರಾವ್ ಹೇಳಿದ್ದಾರೆ.
ಮತ್ತೊಂದು ಘಟನೆಯಲ್ಲಿ ಸಿಂಧಿ ಜಿಲ್ಲೆಯಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗೆ ಹೃದಯಾಘಾತವಾಗಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ರಾವ್ ಹೇಳಿದ್ದಾರೆ. ಬ್ರೈನ್ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಬಾಲ್ಗಟ್ ಲೋಕಸಭಾ ಕ್ಷೇತ್ರದ ಸಿಯೋನಿಗೆ ಮತಗಟ್ಟೆ ಸಿಬ್ಬಂದಿಯಾಗಿ ನಿಯೋಜಿಸಲಾಗಿತ್ತು. ಎಂದು ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಸಿಂಧಿ, ಷಾಡೊಲ್, ಜಬಲ್ಜುರ್, ಮಂಡ್ಲ, ಬಾಲ್ಗಟ್ ಮತ್ತು ಚಿಂದ್ವಾರ ವಿಧಾನ ಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಚಿಂದ್ವಾರ ವಿಧಾನ ಸಭಾ ಉಪ ಚುನಾವಣೆಗೆ ಮುಖ್ಯಮಂತ್ರಿ ಕಮಲ್ ನಾಥ್ ಸ್ಪರ್ಧಿಸಿದ್ದಾರೆ