ದೇಶ

ಲೋಕಸಭಾ ಚುನಾವಣೆ:ಭರವಸೆ ಮತ್ತು ಅವಕಾಶವಾದ ನಡುವಿನ ಹೋರಾಟ- ರವಿಶಂಕರ್ ಪ್ರಸಾದ್

Nagaraja AB

ನವದೆಹಲಿ:ಈ ಬಾರಿಯ ಲೋಕಸಭಾ ಚುನಾವಣೆ ಭರವಸೆ ಮತ್ತು ಅವಕಾಶವಾದ ನಡುವಿನ ಹೋರಾಟವಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಬಿಹಾರದ ಪಾಟ್ನಾ ಸಾಹಿಬ್  ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುತ್ತಿರುವುದಕ್ಕೆ ಬಿಜೆಪಿಗೆ ಧನ್ಯವಾದ ಹೇಳಿದ ರವಿಶಂಕರ್ ಪ್ರಸಾದ್,  ಅಭಿವೃದ್ಧಿ ಆಧಾರಿತ ವಿಚಾರದ ಮೇಲೆ ನಡೆಯುತ್ತಿರುವ ಚುನಾವಣೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುವ ಭರವಸೆ ಹೊಂದಿರುವುದಾಗಿ ತಿಳಿಸಿದರು.

ಪಾಟ್ನಾ ನನ್ನ ನಗರ. ನಾನು ಹುಟ್ಟಿದ್ದು, ಬೆಳದದ್ದು ಅಲ್ಲಿಯೇ, ಅಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯನಾಗಿದ್ದೆ. ಪಾಟ್ನಾದೊಂದಿಗೆ ಭಾವಾನಾತ್ಮಕ ಸಂಬಂಧ ಹೊಂದಿರುವುದಾಗಿ ಪ್ರಸಾದ್ ಹೇಳಿದರು.

2014ರ ಚುನಾವಣೆಯಲ್ಲಿ  ಹಾಲಿ ಸಂಸದ ಶತ್ರುಘ್ನ ಸಿನ್ಹಾ ಬಿಜೆಪಿ ಟಿಕೆಟ್ ನಿಂದ ಇಲ್ಲಿ ಗೆದ್ದಿದ್ದರು. ಕೇಂದ್ರ ನಾಯಕರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಿದ್ದರಿಂದ ಈ ಬಾರಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ರವಿಶಂಕರ್ ಪ್ರಸಾದ್ ಅವರನ್ನು ಚುನಾವಣಾ ಕಣಕ್ಕಿಳಿಸಲಾಗುತ್ತಿದೆ.

ಶತ್ರುಘ್ನ ಸಿನ್ಹಾ ಈಗ ಏಲ್ಲಿದ್ದಾರೆ?  ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ಗೊತ್ತಿಲ್ಲ, ಅವರ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ ಎಂದು ರವಿಶಂಕರ್ ಪ್ರಸಾದ್ ತಿಳಿಸಿದರು

SCROLL FOR NEXT