ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಲೋಕಸಭಾ ಚುನಾವಣೆ: ಬೇಗುಸಾರೈ ಕ್ಷೇತ್ರದಿಂದ ಕನ್ಹೈಯ ಕುಮಾರ್ ಸ್ಪರ್ಧೆ

ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಮಾಜಿ ಅಧ್ಯಕ್ಷ ಕನ್ಹೈಯ ಕುಮಾರ್ ಬೇಗುಸಾರೈ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಕನ್ಹೈಯ ಕುಮಾರ್
Nagaraja AB
Updated On : 24 Mar 2019, 2:07 am

ಬಿಹಾರ: ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಮಾಜಿ ಅಧ್ಯಕ್ಷ ಕನ್ಹೈಯ ಕುಮಾರ್ ಬೇಗುಸಾರೈ  ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಬಿಹಾರದಲ್ಲಿ ಎಡಪಕ್ಷಗಳಿಗೆ ಮಹಾಮೈತ್ರಿ ಒಂದು ಸೀಟನ್ನು ಹಂಚಿಕೆ ಮಾಡಿದ ಬೆನ್ನಲ್ಲೇ,  ಬೇಗುಸಾರೈ ಕ್ಷೇತ್ರದಿಂದ ಕನ್ಹೈಯ ಕುಮಾರ್ ಅವರನ್ನು ಚುನಾವಣಾ ಕಣಕ್ಕಿಳಿಸಲಾಗುವುದು ಎಂದು ಸಿಪಿಐ ಸ್ಪಷ್ಪಪಡಿಸಿದೆ.

ಬಿಹಾರದಲ್ಲಿ ಸಿಪಿಐ ಎಷ್ಟು ಸ್ಥಾನಗಳಲ್ಲಿ ರ್ಧಿಸಬೇಕೆಂಬ ಬಗ್ಗೆ ನಿರ್ಧರಿಸಲು ಇಂದು ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ಆದರೆ, ಅಂತಿಮವಾಗಿ  ಅಲ್ಲಿಂದ ಕನ್ಹೈಯ ಕುಮಾರ್ ಅವರನ್ನು ಕಣಕ್ಕಿಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಪಿಐ ಬಿಹಾರ ಕಾರ್ಯದರ್ಶಿ ಸತ್ಯನಾರಾಯಣ್ ಸಿಂಗ್ ಹೇಳಿದ್ದಾರೆ.

40 ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಬಿಹಾರದಲ್ಲಿ  ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ 20, ಕಾಂಗ್ರೆಸ್ 9, ಆರ್ ಎಲ್ ಎಸ್ 5 ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಟಾ ಮೂರು, ದಿ ವಿಕಾಶೀಲ್ ಇನ್ಸಾಪ್ ಫಾರ್ಟಿ ಮೂರು ಹಾಗೂ  ಸಿಪಿಐ- ಎಂಎಲ್  ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು  ಶುಕ್ರವಾರ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು.

ಬೇಗುಸಾರೈ ಕ್ಷೇತ್ರದಲ್ಲಿ ಎನ್ ಡಿಎಯಿಂದ ಗಿರಿರಾಜ್ ಸಿಂಗ್, ಸಿಪಿಐನಿಂದ ಕನ್ಹೈಯ ಕುಮಾರ್ ಹಾಗೂ ಆರ್ ಜೆಡಿಯಿಂದ ತನ್ವೀರ್ ಹಾಸನ್ ಸ್ಪರ್ಧಿಸುತ್ತಿದ್ದು, ತ್ರಿಕೋನ ಹೋರಾಟ ಕಂಡುಬರುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments