ಅರುಣ್ ಜೇಟ್ಲಿ 
ದೇಶ

ಬಡವರಿಗೆ '72 ಸಾವಿರ ರು.ಹಣ: ಇದು ಕಾಂಗ್ರೆಸ್‌ನ 'ಕಣ್ಣೊರೆಸುವ ತಂತ್ರ' ಎಂದ ಅರುಣ್ ಜೇಟ್ಲಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಐದು ಕೋಟಿ ಕುಟುಂಬಗಳಿಗೆ ವಾರ್ಷಿಕ ರೂ 72,000 ನೀಡುವ ಭರವಸೆಯನ್ನು ಘೋಷಿಸಿದ ನಂತರ, ಸೋಮವಾರ ಬಿಜೆಪಿ ನಾಯಕ....

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಐದು ಕೋಟಿ ಕುಟುಂಬಗಳಿಗೆ ವಾರ್ಷಿಕ ರೂ 72,000 ನೀಡುವ  ಭರವಸೆಯನ್ನು ಘೋಷಿಸಿದ ನಂತರ, ಸೋಮವಾರ ಬಿಜೆಪಿ ನಾಯಕ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇದೊಂದು "ಜನರನ್ನು ವಂಚಿಸುವ ಕಪಟದ ನುಡಿ, ಕಣ್ಣೊರೆಸುವ ತಂತ್ರ " ಎಂದು ಕರೆದಿದ್ದಾರೆ.
"ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಇತಿಹಾಸದಲ್ಲಿ ತಾನು ಅಧಿಕಾರ ಗಳಿಸಲು ಬಡತನವನ್ನು ಅಸ್ತ್ರವಾಗಿಸಿಕೊಳ್ಳುತ್ತಾ ಬಂದಿದೆ.ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಜೇಟ್ಲಿ ಹೇಳಿದ್ದಾರೆ.
"ಕಾಂಗ್ರೆಸ್ ಇತಿಹಾಸದಲ್ಲೇ ಬಡತನದ ಕುರಿತು ಹೋರಾಡಿಲ್ಲ, ಅಥವಾ ಬಡತನವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅವರಿಗೆ ಯಾವುದೇ ಉತ್ತಮ ಯೋಜನೆ  ಕೊಟ್ಟ ಉದಾಹರಣೆಗಳಿಲ್ಲ"
"ಯೋಜನೆಗಳ ಹೆಸರಿನಲ್ಲಿ, ಕೇವಲ ಜನರನ್ನು ಮೋಸಗೊಳಿಸಲು ಮಾತ್ರ  ಕಾಂಗ್ರೆಸ್ ಮುಂದಾಗುತ್ತಿದೆ.ನೆಹರೂ ಕಾಲದಲ್ಲೇ ಭಾರತದ ಬೆಳವಣಿಗೆ ದರ ಕೇವಲ ಶೇ.3.5ರಷ್ಟಿತ್ತು. ಹಾಗಾಗಿ ಕಾಂಗ್ರೆಸ್ ಗೆ ಸುಳ್ಳು ಭರವಸೆ ನೀಡುವ ಇತಿಹಾಸವಿದೆ. ಅವರು 2008 ರಲ್ಲಿ ರೂ 72,000 ರೂ ಸಾಲ ಮನ್ನಾ ಭರವಸೆಯನ್ನು ನೀಡಿದ್ದರು. ಆದರೆ 52,000 ರೂಪಾಯಿ ಮಾತ್ರ ಮನ್ನಾ ಆಗಿತ್ತು.ಓರ್ವ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ಹಾಗೂ ದೆಹಲಿಯ ಉದ್ಯಮಿಗಳು  ಬಹಳಷ್ಟು ಹಣವನ್ನು ಪಡೆದಿದ್ದರು." ಜೇಟ್ಲಿ ಹೇಳಿದ್ದಾರೆ.
ಗಾಂಧಿ ತಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆಯ ಭಾಗವಾಗಿ ರತದ ಬಡ ಕುಟುಂಬಗಳಿಗೆ 72,000 ರೂ. ನೀಡುವುದಾಗಿ ಘೋಷಿಸಿದ್ದಾರೆ.ದೇಶದಲ್ಲಿ 20% ಬಡವರಿಗೆ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವ ಯೋಜನೆ ಜಾರಿಗೆ ತರುವುದಾಗಿ ಅವರು ಹೇಳಿದ್ದಾರೆ.
ದೇಶದ ಬಡವರಿಗೆ ಗಾಂಧಿಯವರು ನೀಡಿದ ಭರವಸೆಯ ಮೊತ್ತದ ಒಂದೂವರೆ ಪಟ್ಟು ಹೆಚ್ಚಿನ ಹಣವನ್ನು ಕೇಂದ್ರದ ಮೋದಿ ಸರ್ಕಾರ ಈಗಾಗಲೇ ನೀಡುತ್ತಿದೆ ಎಂದು  ಕೇಂದ್ರ ಹಣಕಾಸು ಸಚಿವ ತನ್ನ ಹೇಳಿಕೆಯಲ್ಲಿ ವಿವರಿಸಿದರು. "ನಾವು ಈಗಾಗಲೇ 75 ಸಾವಿರ ಕೋಟಿ ರೂ. ರಸಗೊಬ್ಬರ ಸಬ್ಸಿಡಿಯನ್ನು ನೀಡುತ್ತೇವೆ ಮತ್ತು ಆರೋಗ್ಯಕ್ಕಾಗಿ 20,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ನಾವು ನೇರವಾಗಿ ನೇರ ಬ್ಯಾಂಕ್ ವರ್ಗಾವಣೆ ಮೂಲಕ 70-80 ಶೇ ಹಣ ನೀಡುತ್ತಿದ್ದೇವೆ," ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ