ಸಂಗ್ರಹ ಚಿತ್ರ 
ದೇಶ

ನೀತಿಸಂಹಿತೆ: 2 ವಾರದಲ್ಲಿ ಚುನಾವಣಾ ಆಯೋಗದಿಂದ 539 ಕೋಟಿ ರೂ ಮೌಲ್ಯದ ನಗದು, ವಸ್ತುಗಳ ಜಪ್ತಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ರಾಷ್ಟ್ರಾದ್ಯಂತ ಇದಾಗಲೇ ಮಾದರಿ ನೀತಿ ಸಂಹಿತೆ ಜಾರಿ ಮಾಡಿದೆ. ಈ ನಡುವೆ ನೀತಿ ಸಂಹಿತೆ ಜಾರಿಯಾದಂದಿನಿಂದ ಇಂದಿನವರೆಗೆ ಸುಮಾರು....

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ರಾಷ್ಟ್ರಾದ್ಯಂತ ಇದಾಗಲೇ ಮಾದರಿ ನೀತಿ ಸಂಹಿತೆ ಜಾರಿ ಮಾಡಿದೆ. ಈ ನಡುವೆ ನೀತಿ ಸಂಹಿತೆ ಜಾರಿಯಾದಂದಿನಿಂದ ಇಂದಿನವರೆಗೆ ಸುಮಾರು  540 ಕೋಟಿ ರೂ. ಮೌಲ್ಯದ ನಗದು, ಅಕ್ರಮ ಮದ್ಯ ಮತ್ತು ಡ್ರಗ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ತಮಿಳುನಾಡು ರಾಜ್ಯದಲ್ಲಿ ಇಂತಹಾ ಅಕ್ರಮ ಹಣ, ಮದ್ಯದ ವಶದ ಪ್ರಮಾಣ ಗರಿಷ್ಠವಾಗಿದೆ.. ರೂ. 107.24 ಕೋಟಿ ನಗದನ್ನು ತಮಿಳುನಾಡಿನಲ್ಲಿ ವಶಪಡಿಸಿಕೊಂಡರೆ ಉತ್ತರ ಪ್ರದೇಶದಲ್ಲಿ  104.53 ಕೋಟಿ, ಆಂಧ್ರಪ್ರದೇಶದಲ್ಲಿ 103.4 ಕೋಟಿ ಮತ್ತು ಪಂಜಾಬ್ ನಲ್ಲಿ 92.8 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ಹೇಳಿದೆ.
ಕರ್ನಾಟಕದಲ್ಲಿ ವಶಕ್ಕೆ ಪಡೆಯಲಾದ ನಗದು ಸೇರಿ ಒಟ್ಟಾರೆ ಅಕ್ರಮ ವಸ್ತುಗಳ ಮೌಲ್ಯ 26.53 ಕೋಟಿ ರೂ ಆಗಿದ್ದರೆ ಮಹಾರಾಷ್ಟ್ರದಲ್ಲಿ  19.11 ಕೋಟಿ, ತೆಲಂಗಾಣ 8.2 ಕೋಟಿ ರೂ. ಆಗಿದೆ.
ಚುನಾವಣಾ ಆಯೋಗವು ಇದುವರೆಗೆ ವಶಪಡಿಸಿಕೊಂಡ ವಸ್ತುಗಳ ಮೌಲ್ಯ 539.99 ಕೋಟಿ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರ್ಚ್ 10ರಂದು ಚುನಾವಣಾ ಆಯೋಗವು ಚುನಾವಣೆ ದಿನಾಂಕಗಳನ್ನು ಘೋಷಿಸಿದ್ದು ಮಾರ್ಚ್ 25 ರವರೆಗೂ ವಿವರಿಸಲ್ಪಟ್ಟ ಮಾಹಿತಿಯಂತೆ  ಒಟ್ಟು 143.37 ಕೋಟಿ ರೂ. ನಗದು, 89.64 ಕೋಟಿ ಮೌಲ್ಯದ ಮದ್ಯ, 131.75 ಕೋಟಿ ರೂ. ಮೌಲ್ಯದ ಡ್ರಗ್ಸ್, , ಚಿನ್ನ ಮತ್ತು  ರೂ. 162.93 ಕೋಟಿ ರೂ.ಮೊತ್ತದ  ಇತರ ಬೆಲೆಬಾಳುವ  ವಸ್ತುಗಳು ಜಪ್ತಿಯುಆಗಿದೆ ಎಂದು ಅಂಕಿ ಅಂಶಗಳು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್