ಶತ್ರುಘ್ನ ಸಿನ್ಹಾ, ರಾಹುಲ್ ಗಾಂಧಿ 
ದೇಶ

ರಾಹುಲ್ ಭೇಟಿ ಮಾಡಿದ ಶತ್ರುಘ್ನ : ಏಪ್ರಿಲ್ 6 ರಂದು ಕಾಂಗ್ರೆಸ್ ಸೇರ್ಪಡೆ

ಶತ್ರುಘ್ನ ಸಿನ್ಹಾ ಸದ್ಯದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಸ್ಟಾರ್ ನಾಯಕ ಹಾಗೂ ಸ್ಟಾರ್ ಪ್ರಚಾರ ಆಗಿರುವ ಶತ್ರುಘ್ನ ಸಿನ್ಹಾ ಪರವಾಗಿ ಕೆಲಸ ಮಾಡುವುದಾಗಿ ಬಿಹಾರ ಕಾಂಗ್ರೆಸ್ ಉಸ್ತುವಾರಿ ಶಕ್ತಿ ಸಿಂಗ್ ಗೋಯೆಲ್ ಹೇಳಿದ್ದಾರೆ.

ನವದೆಹಲಿ: ಶತ್ರುಘ್ನ ಸಿನ್ಹಾ ಸದ್ಯದಲ್ಲಿಯೇ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಸ್ಟಾರ್  ನಾಯಕ ಹಾಗೂ ಸ್ಟಾರ್ ಪ್ರಚಾರ ಆಗಿರುವ ಶತ್ರುಘ್ನ ಸಿನ್ಹಾ ಪರವಾಗಿ ಕೆಲಸ ಮಾಡುವುದಾಗಿ ಬಿಹಾರ ಕಾಂಗ್ರೆಸ್ ಉಸ್ತುವಾರಿ ಶಕ್ತಿ ಸಿಂಗ್ ಗೋಯೆಲ್ ಹೇಳಿದ್ದಾರೆ.

ಬಿಜೆಪಿ ಸಂಸದರಾಗಿರುವ ಶತ್ರುಘ್ನಸಿನ್ಹಾ  ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ. ಏಪ್ರಿಲ್ 6 ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು  ಅವರು ಸ್ಪಷ್ಪಪಡಿಸಿದ್ದಾರೆ.

ಮೂರು ದಶಕಗಳಿಂದಲೂ ಬಿಜೆಪಿ ಜೊತೆಯಲ್ಲಿದ್ದ ಬಾಲಿವುಡ್ ನಟ, ರಾಜಕಾರಣಿಯಾಗಿರುವ ಶತ್ರುಘ್ನ ಸಿನ್ಹಾ  ಕಾಂಗ್ರೆಸ್ ಸೇರಲಿದ್ದಾರೆ ಎಂಬುದು ನಿನ್ನೆ ನಿರೀಕ್ಷಿಸಲಾಗಿತ್ತು. ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಚುನಾವಣೆಗೆ ಸ್ಪರ್ಧಿಸಲಿದ್ದು, ಬಿಜೆಪಿಯ ರವಿಶಂಕರ್  ಪ್ರಸಾದ್  ವಿರುದ್ಧ ಹೋರಾಟ ನಡೆಸಲಿದ್ದಾರೆ.

ಶತ್ರುಘ್ನ ಸಿನ್ಹಾ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ, ಸಿನ್ಹಾ ಬಹಿರಂಗವಾಗಿ  ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಟೀಕಿಸುತ್ತಿದ್ದರಿಂದ ಅವರಿಗೆ  ಈ ಬಾರಿ ಟಿಕೆಟ್ ನೀಡದೆ  ರವಿಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನೀಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಹಮದಾಬಾದ್‌ನಲ್ಲಿ IPL ಫೈನಲ್; RCBಗೆ ಮಾತ್ರವಲ್ಲ, ಬೆಂಗಳೂರು, ರಾಜ್ಯದ ಯುವ ಜನತೆಗೆ ಮಾಡಿದ ಅನ್ಯಾಯ: ಡಿಕೆ ಶಿವಕುಮಾರ್- Video

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ದರ ಏಷ್ಟಿದೆ?

IPL 2026: ಬರೊಬ್ಬರಿ 5 ಪ್ರಶಸ್ತಿ, ಅದರಿಂದ Vaibhav Sooryavanshi ಗಳಿಸಿದ ಹಣ ಎಷ್ಟು ಕೋಟಿ ಗೊತ್ತಾ?

ಟೀಂ ಇಂಡಿಯಾಗೆ 15 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ; ನಿಲುವನ್ನು ಸ್ಪಷ್ಟಪಡಿಸಿದ BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ!

IPL 2026: ಟ್ರೋಫಿ ಗೆದ್ದ ಬಳಿಕ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮಸ್ತ್ ಡ್ಯಾನ್ಸ್! Video ವೈರಲ್

SCROLL FOR NEXT