ಆನಂದ್ ಪಟವರ್ಧನ್, ಬಿನಾ ಪೌಲ್ ಹಾಗೂ ಆಶಿಕ್ ಅಬು 
ದೇಶ

ಬಿಜೆಪಿಯನ್ನು ದೂರವಿಡಿ, ಪ್ರಜಾಪ್ರಭುತ್ವ ಉಳಿಸಿ: ವೆಟ್ರಿ ಮಾರನ್, ಆಶಿಕ್ ಅಬು ಸೇರಿ 100ಕ್ಕೂ ಹೆಚ್ಚು ಚಿತ್ರನಿರ್ಮಾಪಕರ ಒತ್ತಾಯ

: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ ಮತ ಚಲಾಯಿಸದಿರುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು....

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ ಮತ ಚಲಾಯಿಸದಿರುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು  ಭಾರತೀಯ ಚಲನಚಿತ್ರ ರಂಗದ ಸುಮಾರು 100ಕ್ಕೆ ಹೆಚ್ಚು ಸದಸ್ಯರು ಮನವಿ ಮಾಡಿದ್ದಾರೆ.
ತಮ್ಮ ಸ್ವಂತ ಚಿತ್ರಗಳಿಂಡ ಹೆಸರಾಗಿರುವ ಈ ಚಿತ್ರರಂಗದ ಗಣ್ಯರು www.artistuniteindia.com ನ ಮನವಿಯೊಂದನ್ನು ಪೋಸ್ಟ್ ಮಾಡಿಕೊಳ್ಳುವ ಮೂಲಕ "ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು" ನಾವೆಲ್ಲಾ ಒಟ್ಟಾಗಿದ್ದೇವೆ ಎಂದು ಸಂದೇಶ ನೀಡಿದ್ದಾರೆ.
ಖ್ಯಾತನಾಮರಾಗಿರುವ ವೆಟ್ರಿ ಮಾರನ್, ಆನಂದ್ ಪಟವರ್ಧನ್, ಸನಲ್ ಕುಮಾರ್ ಸಸಿಧರನ್, ಸುದೇವನ್, ಕ್ಯು.ದೀಪಾ ಧನರಾಜ್, ಗುರ್ವೀಂದರ್ ಸಿಂಗ್, ಪುಷ್ಪೇಂದರ್ ಸಿಂಗ್, ಕಬೀರ್ ಸಿಂಗ್ ಚೌಧರಿ, ಅಂಜಲಿ ಮೋಂಟಾರಿಯೋ, ಪ್ರವೀಣ್ ಮೋರ್ಶಾಲಿ, ದೇವಶೀಶ್ ಮಖೀಜಾ, ಆಶಿಕ್ ಅಬು ಮತ್ತು ಬಿನಾ ಪೌಲ್ ಸೇರಿ ಒಟ್ಟು 103 ಮಂದಿ ಈ ಮನವಿಗೆ ಸಹಿ ಹಾಕಿದ್ದಾರೆ.
"ನಮ್ಮ ದೇಅವೀಗ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದೆ. ಸಾಂಸ್ಕೃತಿಕ, ಮತ್ತು ಭೌಗೋಳಿಕವಾಗಿ ವೈವಿಧ್ಯಮಯವಾಗಿದ್ದರೂ ಸಹ, ನಾವು ಯಾವಾಗಲೂ ಒಂದು ಎಂದು ಒಂದು ರಾಷ್ಟ್ರವಾಗಿದ್ದು ತೋರಿಸಿದ್ದೇವೆ.  ನಾವೆಲ್ಲರೂ  ಈ ಅದ್ಭುತ ದೇಶದ ಪ್ರಜೆ ಎಂದು ಭಾವಿಸಿದ್ದೇವೆ,  ಆದರೆ ಈ ಲೋಕಸಭೆ ಚುನಾವಣೆ ಯಲ್ಲಿ ನಾವು ಬುದ್ಧಿವಂತಿಕೆಯಿಂದ ಆಯ್ಕೆ ಮಾಡದಿದ್ದರೆ ಫ್ಯಾಸಿಸ್ಮ್ ಶಕ್ತಿಗಳೆಲ್ಲಾ ಒಟ್ಟಾಗಿ ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ ದಾಳಿ ನಡೆಸಲಿದೆ"
ಇನ್ನು ಅವರೆಲ್ಲರೂ ತಾವು ರಾಜಕೀಯ ಪಕ್ಷದ ವಿರುದ್ಧ ನಿಲ್ಲಲು ಕಾರಣವೇನೆನ್ನುವುದನ್ನೂ ಹೇಳಿದ್ದಾರೆ. ಅದರಲ್ಲಿ ಇಂದು "ದ್ರುವೀಕರಣ ಹಾಗೂ ದ್ವೇಷದ ರಾಜಕೀಯ" ಆಗಿದ್ದರೆ ಗೋರಕ್ಷಣೆ ಹೆಸರಿನ ಹಿಂಸೆ, ದಲಿತರು, ರೈತರು, ಬಡಜನರ ಕಠೀಣ ಸಮಸ್ಯೆಗಳು, ಹೆಚ್ಚುತ್ತಿರುವ ಸೆನ್ಸಾರ್ಶಿಪ್ ಸಹ ಅವರು ಹೇಳುವ ಕಾರಣಗಳಲ್ಲಿ ಸೇರಿದೆ.
2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದಲೂ ದೇಶದಲ್ಲಿ ವಿಷಮ ಪರಿಸ್ಥಿತಿ ಇದೆ.ನಾವು ಇನ್ನೂ ಕೆಟ್ಟದ್ದಕ್ಕಾಗಿ ಮಾಡಬಾರದಾಗಿರುವುದರಿಂಡ ಈ ಬಾರಿ ಬಿಜೆಪಿಗೆ ಮತ ನೀಡಬಾರದೆಂದು ಮನವಿಯಲ್ಲಿ ಕೇಳಲಾಲ್ಗಿದೆ. ದೇಶಭಕ್ತರು ಬಿಜೆಪಿಯ "ಟ್ರಂಪ್ ಕಾರ್ಡ್" ಎಂದು ಚಿತ್ರನಿರ್ಮಾಪಕರು ಹೇಳಿದ್ದಾರೆ. "ಸಣ್ಣ ವಿರೋಧವನ್ನು ಹುಟ್ಟುಹಾಕುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು 'ರಾಷ್ಟ್ರ ವಿರೋಧಿ' ಎಂದು ಬಿಂಬಿಸಲಾಗಿದೆ. ದೇಶಭಕ್ತಿಯು ಅವರ ಮತ ಬ್ಯಾಂಕ್ ಎಂದು ಅವರು ಹೇಳಿಕೊಂಡಿದ್ದಾರೆ.
"ಈ ಹಾನಿಕಾರಕ ಆಡಳಿತವನ್ನು ಅಧಿಕಾರಕ್ಕೆ ಮರಳಿ ಬರದಂತೆ ತಡೆಯಲು ನಿಮ್ಮೆಲ್ಲರ ಸಾಮರ್ಥ್ಯವನ್ನು ಬಳಸಬೇಕೆಂದು ನಾವು ಒತ್ತಾಯಿಸುತ್ತೇವೆ.ಭಾರತದ ಸಂವಿಧಾನವನ್ನು ಗೌರವಿಸುವ ಸರ್ಕಾರವನ್ನು ಆಯ್ಕೆ ಮಾಡಲು ನಿಮ್ಮ ಹಕ್ಕನ್ನು ಚಲಾಯಿಸಿರಿ. " ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Trump ಭಾಗಿಯಾಗಲಿರುವ ಗಾಜಾ ಶಾಂತಿ ಶೃಂಗಸಭೆಗೆ ಪ್ರಧಾನಿಗೆ ಈಜಿಪ್ಟ್‌ನ ಸಿಸಿ ಆಹ್ವಾನ: US ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ತಾರಾ ಮೋದಿ?

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

Tomahawk Missiles: ಅಮೆರಿಕ ಉಕ್ರೇನ್ ಗೆ 'ಟೊಮಾಹಾಕ್ ಕ್ಷಿಪಣಿ' ನೀಡುವ ಸಾಧ್ಯತೆ, ರಷ್ಯಾದ ಬಿಗ್ ವಾರ್ನಿಂಗ್ ಏನು?

'ಕುವೆಂಪು ನಾಡಕವಿಯಲ್ಲ, ರಾಷ್ಟ್ರಕವಿ': ಬಿ.ವೈ. ವಿಜಯೇಂದ್ರಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!

SCROLL FOR NEXT