ದೇಶ

ರಾಹುಲ್ ಗಾಂಧಿ 'ಪಪ್ಪು' ಅಲ್ಲ ಅತ್ಯುನ್ನತ ವಿದ್ಯಾವಂತರು - ಸ್ಯಾಮ್ ಪಿತ್ರೋಡಾ

Nagaraja AB

ಇಂದೋರ್ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಪ್ಪು ಅಲ್ಲ, ಅವರು ಅತ್ಯುನ್ನತ ಶಿಕ್ಷಣ ಪಡೆದಿದ್ದು, ದೇಶಕ್ಕೆ ಯುವ ನಾಯಕತ್ವದ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡ  ಸ್ಯಾಮ್  ಪಿತ್ರೋಡಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಜೊತೆಗೆ ಧೀರ್ಘಕಾಲ ಕಳೆದಿದ್ದು, ಹೇಗೆ ದೇಶವನ್ನು ಮುನ್ನಡೆಸಬಹುದು ಎಂಬ ಬಗ್ಗೆ ಮಾತನಾಡಿದ್ದೇವೆ. ಅವರ ಬಗ್ಗೆ ಬಿಜೆಪಿ ಕಳೆದ 10 ವರ್ಷಗಳಿಂದ ಏನನ್ನೂ ಹೇಳುತ್ತಾ ಬಂದಿದ್ದೆಯೂ ಅದನ್ನು ರಾಹುಲ್ ಗಾಂಧಿ ಸುಳ್ಳು ಮಾಡುವ ವಿಶ್ವಾಸವಿದೆ. ಅವರ ಪಪ್ಪು ಅಲ್ಲ, ಅತ್ಯುನ್ನತ ಶಿಕ್ಷಣ ಪಡೆದ ಬುದ್ದಿವಂತರಾಗಿದ್ದಾರೆ ಎಂದರು.

ಭಾರತಕ್ಕೆ ಆಧುನಿಕ ಮನಸ್ಸುಗಳ ಅಗತ್ಯವಿದೆ. ಸುಳ್ಳು ಭರವಸೆಗಳನ್ನು ನೀಡುವವರು ಬೇಕಾಗಿಲ್ಲ, ಉತ್ತಮ ಗುಣವಂತರು ಬೇಕಾಗಿದ್ದಾರೆ. ಜನರ ಭಾವನೆಗಳಿಗೆ ಸ್ಪಂದಿಸುವವರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದವರ ಅಗತ್ಯವಿದೆ. ಆ ಎಲ್ಲಾ ಉತ್ತಮ ಗುಣಗಳು ರಾಹುಲ್ ಗಾಂಧಿ ಅವರಲ್ಲಿ ಇರುವ ವಿಶ್ವಾಸವಿದೆ ಎಂದು ಹೇಳಿದರು.2014ರಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಅವರನ್ನು ಪಪ್ಪು  ಎಂದು ಟ್ರೋಲ್ ಮಾಡಲಾಗುತ್ತಿದೆ.

ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾಗಾಂಧಿ ಜೊತೆಗೂ ಕೂಡಾ ಕೆಲಸ ಮಾಡಿದ್ದೇನೆ. ರಾಜೀವ್ ಗಾಂಧಿ ಅವರನ್ನು ಹತ್ತಿರದಿಂದ ಬಲ್ಲೆ, ಇದು ಕುಟುಂಬ ರಾಜಕಾರಣವಲ್ಲ, ಆದರೆ, ಯಾರೂ ಪಕ್ಷವನ್ನು ಮುನ್ನಡೆಸುತ್ತಾರೋ ಅಂತಹವರು ಭಾರತದ ಭವಿಷ್ಯ ಹಾಗೂ ಪ್ರಜಾಪ್ರಭುತ್ವದಲ್ಲೂ ಪಾಲುದಾರರಾಗುತ್ತಾರೆ ಎಂದು ಹೇಳಿದರು.

ರಾಜೀವ್ ಗಾಂಧಿ ಅವರನ್ನು ನಂಬರ್ 1 ಭ್ರಷ್ಟಾಚಾರಿ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಯಾಮ್ ಪಿತ್ರೋಡಾ ವಾಗ್ದಾಳಿ ನಡೆಸಿದರು. ಇದನ್ನು ಕೇಳಿದಾಗ ತುಂಬಾ ನೋವಾಯಿತು. ನಾನು ಕೂಡಾ ಗುಜರಾತಿ, ಅಲ್ಲಿಂದಲೇ ಬಂದಿದ್ದೇನೆ. ಮೋದಿ ಸುಳ್ಳುಗಳನ್ನು ಹರಡುತ್ತಿದ್ದಾರೆ. ಐದು ವರ್ಷಗಳ ಬಿಜೆಪಿ ಸರ್ಕಾರದ ಸಾಧನೆ ವರದಿ ತುಂಬಾ ಕೆಟ್ಟದಾಗಿದೆ. ಆದರೆ, ಇದರ ಬಗ್ಗೆ ಯಾರೂ ಕೂಡಾ ತುಟ್ಟಿ ಬಿಚ್ಚುತ್ತಿಲ್ಲ ಎಂದು ಸ್ಯಾಮ್ ಪಿತ್ರೋಡಾ ಹೇಳಿದರು.

SCROLL FOR NEXT