ಶಶಿ ತರೂರ್ 
ದೇಶ

ಅನಾರೋಗ್ಯಪೀಡಿತರಿಗೆ ಖಿಚಡಿಯೇ ಬೇಕು: ಪ್ರಧಾನಿ 'ಖಿಚಡಿ' ಹೇಳಿಕೆಗೆ ಶಶಿ ತರೂರ್ ಟಾಂಗ್

ಪ್ರಧಾನಿ ಮೋದಿ ಪ್ರತಿಪಕ್ಷಗಳ ಮಹಾಘಟಬಂಧನ್ ಸರ್ಕಾರವು "ಖಿಚಡಿ" ಸರ್ಕಾರವಾಗಲಿದೆ, ದೇಶಕ್ಕೆ ಈ ಖಿಚಡಿ ಸರ್ಕಾರ ಬೇಡ ಎಂಬ ಮಾತಿಗೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಕೈ ಅಭ್ಯರ್ಥಿ....

ನವದೆಹಲಿ: ಪ್ರಧಾನಿ ಮೋದಿ ಪ್ರತಿಪಕ್ಷಗಳ ಮಹಾಘಟಬಂಧನ್ ಸರ್ಕಾರವು "ಖಿಚಡಿ" ಸರ್ಕಾರವಾಗಲಿದೆ, ದೇಶಕ್ಕೆ ಈ ಖಿಚಡಿ ಸರ್ಕಾರ ಬೇಡ ಎಂಬ ಮಾತಿಗೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಕೈ ಅಭ್ಯರ್ಥಿ ಶಶಿ ತರೂರ್ ಪ್ರತಿದಾಳಿ ನಡೆಸಿದ್ದಾರೆ. "ಮೋದಿಜೀ, ನೀವೇನಾದರೂ ಅನಾರೋಗ್ಯಕ್ಕೆ ತುತ್ತಾದರೆ ಆಗ ನಿಮಗೆ ಖಿಚಡಿಯೇ ಬೇಕಾಗುತ್ತದೆ, ಹಾಗಾಗಿ ಮಹಾಘಟಬಂಧನ್ ಬಗೆಗೆ ಬಿಜೆಪಿ ಬೆಂಬಲಿಗರು ಮಾತನಾಡುವಾಗ ಒಮ್ಮೆ ಯೋಚಿಸಿರಿ" ಎಂದಿದ್ದಾರೆ.
ಜಾರ್ಖಂಡ್ ನಲ್ಲಿನ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಮಾತನಾಡಿ "ಮಹಾಘಟಬಂಧನ್ ನಾಯಕರಿಗೆ ಕೇಂದ್ರದಲ್ಲಿ ಬಹುಮತದ ಸರ್ಕಾರ ಬರುವುದು ಬೇಡವಾಗಿದೆ, ಅವರಿಗೆ ಕಾಂಗ್ರೆಸ್ ಜತೆ ಸೇರಿ ಖಿಚಡಿ ಸರ್ಕಾರ ರಚನೆ ಮಾಡುವ ಹಂಬಲವಿದೆ" ಎಂದಿದ್ದಾರೆ.
ಈ ಕುರಿತಂತೆ ಪ್ರತಿದಾಳಿ ನಡೆಸಿದ ತರೂರ್ "ಬಿಜೆಪಿಯವರ ಬಹುಸಂಖ್ಯಾತರ ಓಲೈಕೆಯ ಹಾಗೂ ವಿಭಜಿತ ರಾಜಕೀಯದ ಕುರಿತು ಜನರು ನಿರಾಶರಾಗಿದ್ದಾರೆ. ಬಿಜೆಪಿ ಬೆಂಬಲಿಗರು ವಿರೋಧಿಗಳನ್ನು ಹಳಿಯಲು ಬೇರೆ ಬೇರೆ ಪದಪುಂಜಗಳನ್ನು ಬಳಸಿದ್ದಾರೆ. ಬಿಜೆಪಿ ದೃಷ್ಟಿಕೋನವನ್ನು ಟೀಕಿಸುವವರೆಲ್ಲಾ ರಾಷ್ಟ್ರದ್ರೋಹಿಗಳಾಗುತ್ತಾರೆ, ಅವರೆಲ್ಲಾ "ತುಕ್ಡೇ ತುಕ್ಡೇ ಗ್ಯಾಂಗ್" ನವರಾಗುತ್ತಾರೆ. ನರೇಂದ್ರ ಮೋದಿ ಮತ್ತು ಅವರ ಬೆಂಬಲಿತರು ವಿರೋಧಿಗಳನ್ನು ಸುಳ್ಲು ಹೇಳುವ ಮೂಲಕ ತಪ್ಪಾಗಿ ಬಿಂಬಿಸುವುದರಲ್ಲಿ ನಿಷ್ಣಾತರಿದ್ದಾರೆ.  ಇಂತಹಾ ಸುಳ್ಳು ನಿರೂಪಣೆಗೆ ಸಂಬಂಧಿಸಿದ ದಾಖಲೆಗಳನ್ನು ಅವರು ನೀಡಬೇಕಿದೆ" ತರೂರ್ ಪಿಟಿಐಗೆ ತಿಳಿಸಿದ್ದಾರೆ.
ಭಾರತದ ಸಶಸ್ತ್ರ ಪಡೆಗಳನ್ನು ರಾಜಕೀಯದಿಂದ ದೂರವಿಡಬೇಕಿದೆ, ಆದರೆ ಪ್ರಧಾನಿಗಳು ತಾವೇ ರಾಷ್ಟ್ರದ ರಾಷ್ಟ್ರೀಯ ಭದ್ರತೆಯ ಅಂತಿಮ ರಕ್ಷಕ  ಎಂದು ಹೇಳಿಕೊಳ್ಳುತ್ತಿದ್ದಾರೆ. ಅಲ್ಲದೆ ಬಿಜೆಪಿಯವರು 2014 ರ ಚುನಾವಣಾ ಪ್ರಚಾರದಲ್ಲಿ ಹೇಳಿದಂತೆ "ಅಚ್ಚೇ ದಿನ್" ಆಗಮನಕ್ಕಾಗಿ ದೇಶದ ಸಾಮಾನ್ಯ ಪ್ರಜೆ ಇನ್ನೂ ಕಾಯುತ್ತಲೇ ಇದ್ದಾನೆ. 
"ಮೇ 23 ರಂದು ಬಿಜೆಪಿಗೆ ಹೊರಹೋಗಲು ಬಾಗಿಲನ್ನು ತೋರಿಸಲಿದೆ, ಆ ಮೂಲಕ ದೇಶವು ಅನಾರೋಗ್ಯಕರ ರಾಜಕೀಯ ವನ್ನು ಗುಣಪಡಿಸಿಕೊಳ್ಳಲಿದೆ. ಇದರಲ್ಲಿ ನನಗೆ ಸಂದೇಹವಿಲ್ಲ" ತರೂರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ