ಅರುಣ್ ಜೇಟ್ಲಿ 
ದೇಶ

ತಂದೆ ಭ್ರಷ್ಟರಾಗಿದ್ದರೆಂದು ಹೇಳಿದ ಮಾತ್ರಕ್ಕೆ ರಾಹುಲ್ ಕಸಿವಿಸಿಗೊಳ್ಳುವುದೇಕೆ: ಅರುಣ್ ಜೇಟ್ಲಿ ಪ್ರಶ್ನೆ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಾಯುವ ವೇಳೆ ಅತ್ಯಂತ ಭ್ರಷ್ಟರಾಗಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಾಯುವ ವೇಳೆ ಅತ್ಯಂತ ಭ್ರಷ್ಟರಾಗಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಧ್ಯಕ್ಷರಾಹುಲ್ ಗಾಂಧಿ ಸೇರಿ ಅನೇಕರು ಇದಕ್ಕೆ ಖಾರವಾಗಿ ಪ್ರತಿಕ್ರಯಿಸಿದ್ದಾರೆ. ಆಆದರೆ ಈಗ ಕೇಂದ್ರ ಸಚಿವ ಅರುಣ್ ಜೇಟ್ಲಿ ರಾಜೀವ್ ಭ್ರಷ್ಟರೇಕೆ ಎಂಬ ಕುರಿತು ಪ್ರಧಾನಿಯವರ ಹೇಳಿಕೆಗೆ ಸ್ಪಷ್ತೀಕರಣ ನೀಡಿದ್ದಾರೆ.
ತನ್ನ ತಂದೆ ಭ್ರಷ್ಟರಾಗಿದ್ದರು ಎಂದು ಹೇಳಿದ ಮಾತ್ರಕ್ಕೆ ರಾಹುಲ್ ಗಾಂಧಿ ಏಕೆ ಗೊಂದಲಕ್ಕೊಳಗಾಗುತ್ತಾರೆ? ಎಂದು ಅಚ್ಚರಿ ವ್ಯಕ್ತಪಡಿಸಿರುವ ಜೇಟ್ಲಿ ಬೋಫೋರ್ಸ್ ಫಿರಂಗಿ ಹಗರಣದ ಸಂಬಂಧವನ್ನು ಕಲ್ಪಿಸಿ ಮಾತನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯನ್ನು ಯಾರಾದರೂ ಪ್ರಶ್ನಿಸಬಹುದು, ಅವರ ಮೇಲೆ ಆಕ್ರಮಣ ಮಾಡಬಹುದು ಆದರೆ " "ರಾಜವಂಶ" ಯಾವುದೇ ಪ್ರಶ್ನೆಗೆ ಉತ್ತರಿಸಬೇಕಾಗಿಲ್ಲ ಎಂದು ರಾಹುಲ್ ಗಾಂಧಿ ಭಾವಿಸಿದ್ದಾರೆ ಎಂದು ಜೇಟ್ಲಿ ತಮ್ಮ ಸರಣಿ ಟ್ವೀಟ್ ಮೂಲಕ ಕಾಲೆಳೆದಿದ್ದಾರೆ.
ರಾಜೀವ್ ಗಾಂಧಿಯವರ ಜೀವನವು ನಂಬರ್ 1  ಭ್ರಷ್ಟಾಚಾರಿಯಾಗಿ ಕೊನೆಗೊಂಡಿತೆನ್ನುವ ಮೋದಿ ಮಾತಿಗೆ ರಾಹುಲ್ ಯುದ್ಧ ಮುಗಿದಿದೆ, ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ ಎಂದು ಉತ್ತರಿಸಿದ್ದರು. ನಿಮ್ಮ ಆಂತರಿಕ ನಂಬಿಕೆಗಳನ್ನು ನನ್ನ ತಂದೆ ಮೇಲೆ ಹೇರುವುದರಿಂದ ನಿಮ್ಮನ್ನು ರಕ್ಷಿಸಿಕೊಳ್ಲಲು ಆಗುವುದಿಲ್ಲ ಎಂದೂ ಅವರು ಹೇಳಿದ್ದರು.
ರಾಜೀವ್ ಗಾಂಧಿ ಸರ್ಕಾರದ ಸಮಸ್ಯೆಗಳನ್ನು ಹೇಳಿದರೆ ರಾಹುಲ್ ಏಕೆ ತಲೆಕೆಡಿಸಿಕೊಳ್ಳುತ್ತಿದ್ದಾರೆ? ಬೋಫೋರ್ಸ್ ನಲ್ಲಿ ಒಟಾವಿಯೊ  ಕ್ವಟ್ರೋಚ್ಚಿಗೆ ಕಿಕ್ ಬ್ಯಾಕ್ ನೀಡಿದವರಾರು? ಈ "ಯಾರು?" ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಹ ಹತ್ಯೆಗೀಡಾದರು ಮತ್ತು ಕಾಂಗ್ರೆಸ್ ತುರ್ತು ಪರಿಸ್ಥಿತಿ ಮತ್ತು ಆಪರೇಷನ್ ಬ್ಲೂ  ಸ್ಟಾರ್ ಕುರಿತೂ ಪರ್ಶ್ನೆಗಳಿದೆ. ರಾಜವಂಶವು ತಾನು ಭಾರತದ ಪ್ರಧಾನಿಯ ವ್ಯಕ್ತಿತ್ವದ ಮೇಲೆ ಪ್ರಶ್ನೆಗಳನ್ನು ಎತ್ತಬಹುದು. ಆದರೆ ಅದೇ ರಾಜವಂಶ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿಲ್ಲ ಎಂದು ಅವರು ಭಾವಿಸಿದ್ದಾರೆಯೆ? ಅರುಣ್ ಜೇಟ್ಲಿ ಪ್ರಶ್ನಿಸಿದ್ದಾರೆ.
1989 ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ನ ಸೋಲಿಗೆ ಪ್ರಮುಖ ಕಾರಣವಾಗಿದ್ದದ್ದು ಬೋಫೋರ್ಸ್ ಹಗರಣ ಎಂದೇ ಭಾವಿಸಲಾಗಿದೆ.
ಇನ್ನು ಮೋದಿ ಸರ್ಕಾರ ದೇಶದ ಆರ್ಥಿಕ ಸಂಕಷ್ಟಕರ ಪರಿಸ್ಥಿತಿಗೆ ಕಾರಣವಾಗಿದೆ ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಾರ ಹೇಳಿಕೆಗೆ ಪ್ರತಿಕ್ರಯಿಸಿರುವ ಜೇಟ್ಲಿ "ಡಾ. ಮನಮೋಹನ್ ಸಿಂಗ್ 2014ರಲ್ಲಿ ಅಧಿಕಾರದಿಂಡ ನಿರ್ಗಮಿಸುವಾಗ ದೇಶದ ಆರ್ಥಿಕ ಕುಸಿತ, ಭ್ರಷ್ತಾಚಾರ, ದುರ್ಬಲ ಆರ್ಥಿಕ ನೀತಿಗಳನ್ನು ಬೆನ್ನಿಗೆ ಬಿಟ್ಟು ಹೋಗಿದ್ದಾರೆ. ಇದೇ ಕಾರಣಗಳಿಂಡ ಅವರ ಪಕ್ಷ ಸಂಸತ್ತಿನಲ್ಲಿ ಅತ್ಯಂತ ಕಡಿಮೆ ಸ್ಥಾನ ಗಳಿಸಲು ಸಾಧ್ಯವಾಗಿತ್ತು. ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!