ರಾಹುಲ್ ಗಾಂಧಿ 
ದೇಶ

ನಂ.1 ಭ್ರಷ್ಟಾಚಾರಿ ಎಂಬ ಹಣೆಪಟ್ಟಿಯೊಂದಿಗೆ ನಿಮ್ಮ ತಂದೆ ಜೀವನ ಕೊನೆಯಾಗಿತ್ತು: ರಾಹುಲ್ ಗೆ ಮೋದಿ ಟಾಂಗ್

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಬದುಕು ಭ್ರಷ್ಟಾಚಾರಿ ನಂಬರ್1 ಎಂಬ ಹಣೆ ಪಟ್ಟಿಯೊಂದಿಗೆ ಅಂತ್ಯವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ....

ಬಸ್ತಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಬದುಕು ಭ್ರಷ್ಟಾಚಾರಿ ನಂಬರ್1 ಎಂಬ ಹಣೆ ಪಟ್ಟಿಯೊಂದಿಗೆ ಅಂತ್ಯವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಅವರೇ 1980 ರಲ್ಲಿ ಪ್ರಧಾನಿಯಾಗಿದ್ದ  ಕಾಲದಲ್ಲಿ ಬೋಪೋರ್ಸ್ ಹಗರಣ ನಡೆದಿತ್ತು, ಸೈನ್ಯಕ್ಕೆ ರಕ್ಷಣಾ ಸಾಮಾಗ್ರಿಗಳನ್ನು ಪೂರೈಸುವ ಸ್ವೀಡೀಶ್ ಮೂಲದ ಬೋಪೋರ್ಸ್ ಕಂಪನಿಯಿಂದ ರಾಜೀವ್ ಗಾಂಧಿ  ದೊಡ್ಡ ಮೊತ್ತದ ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದರು.  ಈ ಮೂಲಕ ನಂಬರ್ 1 ಭ್ರಷ್ಟಾಚಾರಿ ಎಂಬ ಹಣೆ ಪಟ್ಟಿಯೊಂದಿಗೆ ಅವರ ಬದುಕು ಅಂತ್ಯವಾಗಿತ್ತು ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷರಿಗೆ ಟಾಂಗ್ ಕೊಟ್ಟಿದ್ದಾರೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ತನ್ನ ಅಹಂಕಾರದಿಂದಲೇ ಕುಸಿಯುತ್ತಾರೆ, ಒಂದೆಡೆ ಸಮಾಜವಾದಿ ಪಕ್ಷದ ಮುಖಂಡರು ಕಾಂಗ್ರೆಸ್‌ ಜತೆಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಆದರೆ ಅದೇ ಸಮಾಜವಾದಿ ಪಕ್ಷದ ಜತೆ ಮಹಾ ಘಟಬಂಧನ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ, ಕಾಂಗ್ರೆಸ್‌ಗೆ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ ಎಂದು ಮೋದಿ ಹೇಳಿದ್ದಾರೆ. 
ಕಾಂಗ್ರೆಸ್‌ ಹಲವು ಬಾರಿ ಬೆಂಬಲ ವಾಪಸ್‌ ಪಡೆದು ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. ಬಿಜೆಪಿ ಮಾತ್ರವೇ ದೇಶಕ್ಕೆ ಸ್ಥಿರ ಸರಕಾರ ನೀಡಬಲ್ಲದು ಎಂದು ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂನಲ್ಲಿ AN-32 ಸಾರಿಗೆ ವಿಮಾನ ಪತನ: ಐವರು IAF ಸಿಬ್ಬಂದಿ ಸಾವು; ತನಿಖೆಗೆ ಆದೇಶ

ಧಾರವಾಡ: love Jihad ಗೆ ಹೆದರಿ ದಲಿತ ಬಾಲಕಿ ಆತ್ಮಹತ್ಯೆ; ರಾಜಿ ಸಂಧಾನಕ್ಕೆ ಯತ್ನ, ಗರಗ CPI ಅಮಾನತು

ಈ ವ್ಯಕ್ತಿ ಕೇವಲ 90 ನಿಮಿಷದಲ್ಲಿ 30 ಕೋಟಿ ಗಳಿಸುತ್ತಾನೆ: ರೊನಾಲ್ಡೊ ಆದಾಯ ನೋಡಿ ಬೆಚ್ಚಿಬಿದ್ದ ಜಗತ್ತು!

'ಕತ್ತು ಹಿಡಿದು ಎಳೆದರು, ಹಲ್ಲೆ ನಡೆಸಿದರು': ಬಾಂಗ್ಲಾದೇಶ ಪೊಲೀಸರ ವಿರುದ್ಧ ಸ್ಟಾರ್ ಕ್ರಿಕೆಟಿಗ ಆರೋಪ; ಅಷ್ಟಕ್ಕೂ ಆಗಿದ್ದೇನು?

ಮಗುವಿನೊಂದಿಗೆ 6ನೇ ಮಹಡಿಯಿಂದ ಜಿಗಿದ ಮಹಿಳಾ ಟೆಕ್ಕಿ; ಮಹಿಳೆ ಸಾವು!

SCROLL FOR NEXT