ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಾಂಗ್ರೆಸ್ ಗೆ ಭಾರೀ ಹಿನ್ನೆಡೆ: ರಾಜೀವ್ ಟೀಕಿಸಿದ್ದ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್

ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಕುರಿತಂತೆ "ರಾಜೀವ್ ಸಾಯುವ ಮುನ್ನ ಅವರು ನಂ 1 ಭ್ರಷ್ಟರಾಗಿದ್ದರು" ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಟೀಕೆ ಸಂಬಂಧ ಚುನಾವಣಾ ಆಯೋಗ (ಇಸಿ) ಪ್ರಧಾನಿಗೆ ಕ್ಲೀನ್ ಚಿಟ್ ನೀಡಿದೆ.

ಚುನಾವಣಾ ಆಯೋಗ
Raghavendra Adiga
Updated On : 7 May 2019, 10:20 am
ನವದೆಹಲಿ: ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಕುರಿತಂತೆ "ರಾಜೀವ್ ಸಾಯುವ ಮುನ್ನ ಅವರು ನಂ 1 ಭ್ರಷ್ಟರಾಗಿದ್ದರು" ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಟೀಕೆ ಸಂಬಂಧ ಚುನಾವಣಾ ಆಯೋಗ (ಇಸಿ) ಪ್ರಧಾನಿಗೆ ಕ್ಲೀನ್ ಚಿಟ್ ನೀಡಿದೆ. ಪ್ರಧಾನಿ ಮೋದಿ ವಿರುದ್ಧ ಮಾದರಿ ನೀತಿ ಸಂಹಿತೆ ಆರೋಪ ಮಾಡಿದ್ದ ಕಾಂಗ್ರೆಸ್ ಆಯೋಗಕ್ಕೆ ದೂರು ಸಲ್ಲಿಸಿತ್ತು.
ರಾಜೀವ್ ಅವರ ವಿರುದ್ಧ ಮೋದಿ ಟೀಕಿಸಿರುವುದು ಖಂಡನಾರ್ಹ ಎಂದಿದ್ದ ಕಾಂಗ್ರೆಸ್ ಮೋದಿ ಭಾರತ ರತ್ನ ಪುರಸ್ಕೃತರಿಗೆ ಅವಮಾನಿಸಿದ್ದಾರೆ ಎಂದು ಹೇಳಿತ್ತು.
ಇದಕ್ಕೆ ಪ್ರತಿಕ್ರಯಿಸಿರುವ ಆಯೋಗ ಪ್ರಧಾನಿಯವರ ಹೇಳಿಕೆಗಳಲ್ಲಿ ಭಾರತಚುನಾವಣಾ ಆಯೋಗದ ಸೂಚನೆಯಲ್ಲಿರುವಂತೆ ಎಂಸಿಸಿಯ  ಯಾವುದೇ ಉಲ್ಲಂಘನೆಯನ್ನು ನಾವು ಗಮನಿಸಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಇಲ್ಲಿಗೇ ಇತ್ಯರ್ಥಗೊಳಿಸಲಾಗಿದೆ ಎಂದು ವಿವರಿಸಿದೆ.

Advertisement

Advertisement

ಉತ್ತರ ಪ್ರದೇಶದ ಚುನಾವಣಾ ರ್ಯಾಲಿಯಲ್ಲಿ ಕಳೆದ ಶನಿವಾರ ಬೋಪೋರ್ಸ್ ಹಗರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ತಾವು ಹತ್ಯೆಯಾಗುವ ವೇಳೆಗೆ ನಂ.1 ಭ್ರಷ್ಟರಾಗಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಯಿಸಿದ್ದ ರಾಹುಲ್ "ಯುದ್ಧ ಮುಗಿದಿದೆ, ನಿಮ್ಮ ಕರ್ಮ ನಿಮಗಾಗಿ ಕಾದಿದೆ" ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement