ದೇಶ

ನಾನೆಂದಿಗೂ ತಲೆ ಬಾಗುವುದಿಲ್ಲ, ಮೋದಿಗೆ ಪ್ರಜಾಪ್ರಭುತ್ವದ ಬಲವಾದ ಕಪಾಳಮೋಕ್ಷವಾಗಬೇಕು: ಮಮತಾ ಬ್ಯಾನರ್ಜಿ

Raghavendra Adiga
ರಘುನಾಥಪುರ್(ಪಶ್ಚಿಮ ಬಂಗಾಳ): "ಈ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಪ್ರಜಾಪ್ರಭುತ್ವ ಬಲವಾದ ಕಪಾಳ ಮೋಕ್ಷ ಮಾಡಬೇಕು" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ದೀದಿಯದು ಸುಲಿಗೆ ಸರ್ಕಾರ ಎಂದು ಜರಿದಿದ್ದ ಪ್ರದಾನಿ ಮೋದಿಗೆ ಮಮತಾ ಈ ರೀತಿ ಪ್ರತ್ಯುತ್ತರ ಹೇಳಿದ್ದಾರೆ.
ಮಹಾತ್ಮಾ ಗಾಂಧಿಯನ್ನು ಕೊಂದಿದ್ದ ಆರ್.ಎಸ್.ಎಸ್. ಮನುಷ್ಯನನ್ನು ಬೆನ್ನಹಿಂದಿಟ್ಟುಕೊಂಡಿರುವ ಬಿಜೆಪಿ ರಾಷ್ಟ್ರೀಯತೆ ಮತ್ತು ದೇಶಭಕ್ತಿಯನ್ನು ಹೇಗೆ ನಂಬಬೇಕು ಎಂದು ಮಮತಾ ಟೀಕಿಸಿದ್ದಾರೆ.
"ರಾಜಕೀಯದಲ್ಲಿ ನಾನೆಂದಿಗೂ ತಲೆ ಬಾಗುವುದಿಲ್ಲ. ತೃಣಮೂಲ ಕಾಂಗ್ರೆಸ್ ಸಿಂಡಿಕೇಟ್ ಪಕ್ಷವೆಂದು ಮೋದಿ ಆರೋಪಿಸಿದ್ದಾರೆ, ನನ್ನ ಸರ್ಕಾರ ಸಿಂಡಿಕೇಟ್ ಗಳಿಂದ ನಡೆವ ಸರ್ಕಾರವೆಂದಿದ್ದಾರೆ. ಅಂತಹಾ ಮೋದಿಗೆ ಪ್ರಜಾಪ್ರಭುತ್ವ ಬಲವಾದ ಹೊಡೆತ ನೀಡಬೇಕು (ಲೋಕಸಭೆ ಚುನಾವಣೆಯಲ್ಲಿ ಮೋದಿ ಸೋಲಬೇಕು) ಎಂದು ಣಾನು ಭಾವಿಸಿದ್ದೇನೆ." ಪುರುಲಿಯಾದ ರಘುನಾಥಪುರ್ ನಲ್ಲಿ ಮಮತಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.
"ಸುಳ್ಳು ಹೇಳುವುದಕ್ಕೆ ಹೆಸರುವಾಸಿಯಾಗಿರುವ ಪ್ರಧಾನಿ" ಎಂದು ಹೇಳಿದ ಮಮತಾ "ಚುನಾವಣೆ ಪ್ರಚಾರಕ್ಕೆಂದು ನನ್ನ ರಾಜ್ಯಕ್ಕೆ ಆಗಮಿಸಿದರೆ ಮೋದಿಗೆ ದುರ್ಗಾ ಪೂಜೆ ಹಾಗೂ ಇತರ ಹಿಂದೂ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲು ನಾನು ಬಿಡುವುದಿಲ್ಲ ಎಂದು ಅವರು ಹೇಳುತ್ತಾರೆ, ಈ ಆರೋಪಗಳನ್ನು ನೀವು ನಂಬುವಿರಾ? ಅಲ್ಲದೆ ಜೈ ಶ್ರೀರಾಮ್ ಘೋಷಣೆ ಕೂಗುವವರನ್ನು ನಾನು ಜೈಲಿಗಟ್ಟುತ್ತೇನೆಂದು ಮೋದಿ ಹೇಳಿದ್ದಾರೆ, ಆದರೆ ನಾನೆಂದೂ ಈ ಘೋಶಣೆಗಳನ್ನು ಕೂಗುತ್ತಾ ಅವರನ್ನು (ಬಿಜೆಪಿ) ಸೇರುವುದಿಲ್ಲ. ಇದಕ್ಕೆ ಬದಲು ನಾನು ಜೈ ಹಿಂದ್ ಎನ್ನುತ್ತೇನೆ" ಎಂದರು
ಬಂಕುರಾ ಜಿಲ್ಲೆಯ ರಾಣಿಬಂದ್ ನಲ್ಲಿ ನಡೆದ ಇನ್ನೊಂದು ಸಮಾವೇಶದಲ್ಲಿ ಮಾತನಾಡಿದ ಮಮತಾ "ಗಾಂಧೀಜಿಯವರ ಕೊಲೆಗಾರರು ಯಾರು ಎಂದು ನನಗೆ ಗೊತ್ತಿಲ್ಲ ಆದರೆ ಆರ್.ಎಸ್.ಎಸ್.ನ ನಾಥುರಾಮ್ ಗೋಡ್ಸೆ ಎಂಬ ಹೆಸರನ್ನು ನಾವು ತಿಳಿದಿದ್ದೇವೆ ನೀವು ದೇಶಭಕ್ತಿಯ ಬಗ್ಗೆ ಮಾತನಾಡುವಾಗ, ರಾಷ್ಟ್ರಸೇವೆಯ ಬಗ್ಗೆ ಹೇಳುವಾಗ ಗೋಡ್ಸೆ ಬಗ್ಗೆ ನಾವೇನು ಹೇಳಬಹುದು? ನೀವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೀರಾ? ನೀವು (ಬಿಜೆಪಿ) ಬ್ರಿಟಿಷರಿಗೆ ಬೆಂಬಲ ನೀಡಿದ್ದೀರಿ. ನಿಮಗೆ ನಾಚಿಕೆ ಇಲ್ಲವೆ?" ಎಂದು ಕಿಡಿ ಕಾರಿದ್ದಾರೆ.
"ಅವರು (ಬಿಜೆಪಿ) ಗಾಂಧೀಜಿ ಮತ್ತು ನೇತಾಜಿ ಅವರನ್ನು ರಾಷ್ಟ್ರ ನಾಯಕರೆಂದು ಭಾವಿಸುವುದಿಲ್ಲ. ಆದರೆ , ದೇಶಭಕ್ತಿಯ ಮೇಲೆ ಮೋದಿ ಮತಯಾಚಿಸುತ್ತಾರೆ"
ಬಿಜೆಪಿಯವರು ಚುನಾವಣೆಯಲ್ಲಿ ರಾಮರಾಜ್ಯದ ಮೇಲೆ  ರಾಜಕಾರಣವನ್ನು ಪ್ರಾರಂಭಿಸುತ್ತಿದ್ದಾರೆ  ಆದರೆ .ಕಳೆದ ಐದು ವರ್ಷಗಳಲ್ಲಿ ಕೇಸರಿ ಪಕ್ಷವು ಸಣ್ಣದೊಂದು ರಾಮಮಂದಿರವನ್ನೂ ನಿರ್ಮಿಸಲು ಸಾಧ್ಯವಾಗಿಲ್ಲ. 2014 ರಲ್ಲಿ ಭರವಸೆ ನೀಡಿದ್ದ 'ಅಚ್ಚೇ ದಿನ್' ಎಲ್ಲಿದೆ?ಅಚ್ಚೇ ದಿನ್ ತರಲು ಅವರು ವಿಫಲರಾಗಿದ್ದ ಖಾರಣ ಮೋದಿ ಅವರು ಎರಡನೆಯ ಅವಧಿಗೆ ಅಧಿಕಾರ ಸ್ವೀಕರಿಸುವುದಿಲ್ಲ ಎಂದು ಟಿಎಂಸಿ ನಾಯಕಿ ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ  12,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕಾರ್ಖಾನೆಗಳು ಮುಚ್ಚಿವೆ ಮತ್ತು ಮೂರು ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ಅವರು ಆರೋಪಿಸಿದ್ದಾರೆ.ಅಷ್ಟೇ ಅಲ್ಲದೆ ಈ ಎಲ್ಲಾ ತೊಂದರೆಗಳ ನಡುವೆಯೂ ಪಶ್ಚಿಮ ಬಂಗಾಳದಲ್ಲಿ ವಾಸಿಸುವವರ ಆದಾಯ ಮೂರು ಪಟ್ಟು ಹೆಚ್ಚಾಗಿದೆ ಎಂದು ಘೋಷಿಸಿದರು.
ಹಿಂದು ಮತ್ತು ಮುಸ್ಲಿಂ ಇಬ್ಬರೂ ಹಿಂಸಾಚಾರದಲ್ಲಿ ಭಾಗವಹಿಸುವುದು ನಾನು ಬಯಸುವುದಿಲ್ಲ.  ನಾವು ಶಾಂತಿಯನ್ನು ಬಯಸುತ್ತೇವೆ.ನಾವು (ಟಿಎಂಸಿ) ಮೋದಿಯವರು ಅಧಿಕಾರದಲ್ಲಿ ಉಳಿಯಲು ಬಯಸುವುದಿಲ್ಲ, ನಾವು ದೆಹಲಿಯಲ್ಲಿ ಸರ್ಕಾರ ರಚನೆಗೆ ಸಹಾಯ ಮಾಡುತ್ತೇವೆ ಎಂದು ಅವರು ಹೇಳಿದರು.
SCROLL FOR NEXT