ಆಗಿದ್ದಾಗೋಯ್ತು ಅನ್ನೋ ಮನಸ್ಥಿತಿಯಲ್ಲೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ದೇಶವನ್ನು ಮುನ್ನಡೆಸಿದ್ದವು: ಮೋದಿ
ಕಾಂಗ್ರೆಸ್ ಹಾಗೂ ಅದರ ಮಹಾಮಿಲಾವಟ್ (ಮಹಾ ಕಲಬೆರಕೆ) ಮಿತ್ರಪಕ್ಷಗಳು ಆಗಿದ್ದಾಗೋಯ್ತು ಎಂಬ ಮನಸ್ಥಿತಿಯಲ್ಲೇ ದೇಶವನ್ನು ಮುನ್ನಡೆಸಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಹಾಗೂ ಅದರ ಮಹಾಮಿಲಾವಟ್ (ಮಹಾ ಕಲಬೆರಕೆ) ಮಿತ್ರಪಕ್ಷಗಳು ಆಗಿದ್ದಾಗೋಯ್ತು ಎಂಬ ಮನಸ್ಥಿತಿಯಲ್ಲೇ ದೇಶವನ್ನು ಮುನ್ನಡೆಸಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
1984 ರಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆ ಕುರಿತು ಆಗಿದ್ದಾಗೋಯ್ತು ಎಂಬ ಹೇಳಿಕೆ ನೀಡಿ ಜನತೆ ಕೆಂಗಣ್ಣಿಗೆ ಗುರಿಯಾಗಿದ್ದ ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನಿಟ್ಟುಕೊಂಡು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಮೂರು ಶಬ್ದಗಳ ಆಧಾರದಲ್ಲಿ ಈ ದೇಶವನ್ನು ನಡೆಸಿದ್ದಾರೆ. ಆಗಿದ್ದು ಆಯ್ತು ಏನಿವಾಗ ಎಂಬುದೇ ಅವರ ಮಂತ್ರ, ಇದು ಅವರ ಅಹಂಕಾರದ ಮನಸ್ಥಿತಿಯನ್ನು ತೋರುತ್ತದೆ ಎಂದು ಮೋದಿ ಹೇಳಿದ್ದಾರೆ.