ಗೌತಮ್ ಗಂಭೀರ್-ಸುಬ್ರಮಣಿಯಂ ಸ್ವಾಮಿ
ನವದೆಹಲಿ: ರಾಜಕೀಯದಲ್ಲಿ ಅಂಬೆ ಕಾಲಿಡುತ್ತಿರುವ ಗೌತಮ್ ಗಂಭೀರ್ ಯಾಕೆ ಅಷ್ಟು ಗಂಭೀರಗೊಂಡಿದ್ದೀರಾ? ಕೆಲವೊಂದನ್ನು ಅಲ್ಲಿಗೆ ಬಿಟ್ಟುಬಿಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯಂ ಸ್ವಾಮಿ ಸಲಹೆ ನೀಡಿದ್ದಾರೆ.
ಪೂರ್ವ ದೆಹಲಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಹಾಗೂ ಎಎಪಿ ನಡುವೆ ಅನಾಮಧೇಯ ಕರಪತ್ರ ಸಂಬಂಧ ವಾಕ್ಸಮರ ಶುರುವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸ್ವಾಮಿ ನಕ್ಸಲರು ಸೃಷ್ಟಿಸಿರುವ ಅನಾಮಧೇಯ ಕರಪತ್ರದ ಕುರಿತು ಗಂಭೀರ್ ಏಕೆ ಅಷ್ಟು ಗಂಭೀರವಾಗಿದ್ದೀರಾ? ಅದಕ್ಕಾಗಿ ಏಕೆ ಅಷ್ಟು ಸ್ಪಷ್ಟನೆ ನೀಡುತ್ತಿದ್ದೀರಾ? ಅವರು ಅದನ್ನು ಕಡೆಗಣಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನು ತಮ್ಮ ಟ್ವೀಟ್ ನಲ್ಲಿ ಮೂಲಕ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದರೆ ಕಡೆಗಣಿಸಿ ಎಂದಿದ್ದಾರೆ. ಈ ಮೂಲಕ ಚುನಾವಣಾ ಆಯೋಗವನ್ನು ಮೂಲಕ ಆಯೋಗ ಎಂದು ಸ್ವಾಮಿ ಟೀಕಿಸಿದ್ದಾರೆ.
ಆಪ್ ಅಭ್ಯರ್ಥಿ ಆತಿಶಿ ಅವರ ವಿರುದ್ಧ ಅಶ್ಲೀಲ ಕಮೆಂಟ್ ಗಳು ಇವೆ ಎನ್ನಲಾದ ಕರಪತ್ರ ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಇದರಲ್ಲಿ ತಮ್ಮ ಕೈವಾಡ ಇದ್ದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ. ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಾಜಕೀಯ ತೊರೆಯಬೇಕು ಎಂದು ಗೌತಮ್ ಗಂಭೀರ್ ಸವಾಲು ಹಾಕಿದ್ದಾರೆ.