ಟಿಕೆಟ್ ಗಾಗಿ ಕೇಜ್ರಿವಾಲ್ ಗೆ 6 ಕೋಟಿ: ಪುತ್ರನ ಆರೋಪ ತಳ್ಳಿಹಾಕಿದ ಆಪ್ ಅಭ್ಯರ್ಥಿ!
ನನ್ನ ತಂದೆ ಟಿಕೆಟ್ ಪಡೆಯುವುದಕ್ಕಾಗಿ ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ಗೆ 6 ಕೋಟಿ ನೀಡಿದ್ದಾರೆ ಎಂಬ ತನ್ನ ಪುತ್ರನ ಆರೋಪವನ್ನು ಪಶ್ಚಿಮ ದೆಹಲಿಯಿಂದ ಚುನಾವಣೆಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷದ
ನನ್ನ ತಂದೆ ಟಿಕೆಟ್ ಪಡೆಯುವುದಕ್ಕಾಗಿ ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ಗೆ 6 ಕೋಟಿ ನೀಡಿದ್ದಾರೆ ಎಂಬ ತನ್ನ ಪುತ್ರನ ಆರೋಪವನ್ನು ಪಶ್ಚಿಮ ದೆಹಲಿಯಿಂದ ಚುನಾವಣೆಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಬಲ್ ಬೀರ್ ಸಿಂಗ್ ಜಖಾರ್ ತಳ್ಳಿಹಾಕಿದ್ದಾರೆ.
ಪುತ್ರನ ಹೇಳಿಕೆಯನ್ನು ಖಂಡಿಸಿರುವ ಅಭ್ಯರ್ಥಿ ಬಲ್ ಬೀರ್ ಸಿಂಗ್, ನನ್ನ ಉಮೇದುವಾರಿಕೆ ಬಗ್ಗೆ ಮಗನ ಜೊತೆ ಎಂದಿಗೂ ಮಾತನಾಡಿಲ್ಲ, ಮಗನೊಂದಿಗೆ ಮಾತನಾಡುವುದೇ ಅಪರೂಪ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಮಗ ನನ್ನ ಪತ್ನಿಯ ತವರುಮನೆಯಲ್ಲಿದ್ದಾನೆ. 2009 ರಲ್ಲಿ ಪತ್ನಿಗೆ ನಾನು ವಿಚ್ಚೇದನ ನೀಡಿದ್ದೇನೆ. ನನ್ನೊಂದಿಗೆ 6-7 ತಿಂಗಳಷ್ಟೇ ಅವನು ಇದ್ದದ್ದು ಎಂದು ಬಲ್ ಬೀರ್ ಸಿಂಗ್ ಜಖಾರ್ ಹೇಳಿದ್ದಾರೆ.