ಇಂದೋರ್: ಪ್ರಧಾನಿ ನರೇಂದ್ರ ಮೋದಿ ನವವಧುವಿನಂತೆ, ಕೆಲಸ ಕಡಿಮೆ ಮಾಡಿ ಹೆಚ್ಚು ಬಿಲ್ಡಪ್ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಕಾಲೆಳೆದಿದ್ದಾರೆ.
ಅಡುಗೆ ಮಾಡಲಾಗದ ವಧು ಹೆಚ್ಚು ಕೆಲಸ ಮಾಡುತ್ತಿದ್ದೇನೆ ಎಂದು ನೆರೆಹೊರೆಯವರು ತಿಳಿದುಕೊಳ್ಳಲಿ ಎಂದು ಬಳೆಗಳ ಶಬ್ದ ಜಾಸ್ತಿ ಮಾಡುತ್ತಾಳೆ. ಇದೇ ರೀತಿ ನರೇಂದ್ರ ಮೋದಿ ಸರ್ಕಾರ ಮಾಡಿದೆ ಎಂದು ಕಿಡಿಕಾರಿದರು.
ಪ್ರಧಾನಿಯನ್ನು ಟೀಕಿಸುವ ಭರದಲ್ಲಿ ಸಿಧು ಹೆಣ್ಣು ಮಕ್ಕಳನ್ನು ಅವಮಾನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಒಟ್ಟಿನಲ್ಲಿ ಮೋದಿಯನ್ನು ವಿರೋಧಿಸಿದರೆ ತಾವು ಪ್ರಪಂಚವನ್ನೇ ಗೆದ್ದಂತೆ ಎಂಬ ಮನಸ್ಥಿತಿಯಲ್ಲಿದ್ದಾರೆ ಕಾಂಗ್ರೇಸಿಗರು.